Select Your Language

Notifications

webdunia
webdunia
webdunia
webdunia

ಜಲಜೀವನ್ ಮಿಷನ್ನಿಂದ 5 ಕೋಟಿ ಮನೆಗಳಿಗೆ ನೀರು ಸರಬರಾಜು: ಮೋದಿ

ಜಲಜೀವನ್ ಮಿಷನ್ನಿಂದ 5 ಕೋಟಿ ಮನೆಗಳಿಗೆ ನೀರು ಸರಬರಾಜು: ಮೋದಿ
ನವದೆಹಲಿ , ಶನಿವಾರ, 2 ಅಕ್ಟೋಬರ್ 2021 (15:25 IST)
ನವದೆಹಲಿ, ಅ 02: ದೇಶದಲ್ಲಿ ಜಲಜೀವನ್ ಮಿಷನ್ನಿಂದ 5 ಕೋಟಿ ಮನೆಗಳಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಲ್ಲಿಯ ಮೂಲಕ ಸುಮಾರು 1.25 ಲಕ್ಷ ಗ್ರಾಮಗಳಲ್ಲಿ ಮನೆಗಳಿಗೆ ನೀರು ಪೂರೈಕೆ ಆಗುತ್ತಿದೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ 2019ರವರೆಗೆ ದೇಶದಲ್ಲಿ ಮೂರು ಕೋಟಿ ಕುಟುಂಬಗಳಿಗಷ್ಟೇ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ಈಗ 80 ಜಿಲ್ಲೆಗಳಲ್ಲಿ 5 ಕೋಟಿ ಕುಟುಂಬಗಳಿಗೆ ಸಂಪರ್ಕ ಒದಗಿಸಲಾಗಿದೆ ಎಂದಿದ್ದಾರೆ.
ಹಿಂದೆ ಆಡಳಿತ ನಡೆಸಿದವರು ಬಡತನವನ್ನು ನೋಡಿರಲಿಲ್ಲ, ಅದು, ಅವರಿಗೆ ಆಕರ್ಷಣೆಯಾಗಿತ್ತು, ಜ್ಞಾನದ ಪ್ರದರ್ಶನದ ವೇದಿಕೆ ಆಗಿತ್ತು. ಅವರು ಮಾದರಿ ಗ್ರಾಮ ನಿರ್ಮಿಸಬಹುದಿತ್ತು. ಆದರೆ, ಅವರಿಗೆ ಅಲ್ಲಿನ ಸಮಸ್ಯೆಗಳಷ್ಟೇ ಇಷ್ಟವಾಗಿದ್ದವು ಎಂದರು ಹೇಳಿದರು.
ಜಲ ಜೀವನ ಮಿಷನ್ ದೇಶದ ಮಹಿಳೆಯರ ಸಮಯವನ್ನು ಉಳಿಸುವ ಮೂಲಕ ಅವರ ಸಬಲೀಕರಣಕ್ಕೆ ಸಹಾಯಕವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧಿ ಜಯಂತಿ ಪ್ರಯುಕ್ತ ʼಮೆಟ್ರೋʼ ಪ್ರಯಾಣಿಕರಿಗೆ ಬಂಪರ್ ಆಫರ್