Publish Date: Wed, 24 Nov 2021 (07:13 IST)
Updated Date: Wed, 24 Nov 2021 (00:16 IST)
ಬೆಂಗಳೂರು : ಕಳೆದ ಎರಡು ತಿಂಗಳಿನಿಂದ ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಹೆಚ್ಚುತ್ತಿವೆ.
ಸೆಪ್ಟೆಂಬರ್ 15 ರವರೆಗೆ 2,987 ಪ್ರಕರಣಗಳು ಕಂಡು ಬಂದರೆ, ನವೆಂಬರ್ 17 ರವರೆಗೆ 2,516 ಪ್ರಕರಣಗಳು ದಾಖಲಾಗಿವೆ. ಎರಡೇ ತಿಂಗಳಲ್ಲಿ ಶೇ. 84 ಹೆಚ್ಚಳ ಹೇಗಾಯ್ತು ಎಂಬ ಪ್ರಶ್ನೆ ಮೂಡುತ್ತದೆ. ಅಕಾಲಿಕ ಮಳೆಯೇ ಸೊಳ್ಳೆಗಳ ಅಧಿಕ ಸಂತಾನೋತ್ಪತ್ತಿಗೆ ಕಾರಣವಾಗಿದೆ. ಇದರಿಂದ ಡೆಂಗ್ಯೂ ಹಬ್ಬಿತು ಎಂದು ವೈದ್ಯರು ಹೇಳುತ್ತಾರೆ.
ಅಕ್ಟೋಬರ್ 21 ರಂದು ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಡೆಂಗ್ಯೂಗೆ ಐವರು ನಿಧನರಾದರು. ಇದು ಈ ವರುಷದಲ್ಲಿ ಈ ಕಾಯಿಲೆಗೆ ತೆತ್ತ ಜೀವ ಬೆಲೆಯಾಗಿದೆ. ನವೆಂಬರ್ ಆರಂಭದಿಂದ ಕರ್ನಾಟಕದಲ್ಲಿ 441 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಈ ಮಾಸದಲ್ಲಿ ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿಲ್ಲ.
2021 ರಲ್ಲಿ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರು ಪರೀಕ್ಷೆಗೆ ಒಳಗಾಗಿದ್ದಾರೆ. ಶೇ. 40ರಷ್ಟು ಪರೀಕ್ಷೆಗಳು ಬೆಂಗಳೂರುವೊಂದರಲ್ಲೇ ಜರುಗಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ 1,038 ಪ್ರಕರಣ ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಮಾಣ ಶೇ. 19ರಷ್ಟಿದೆ ನವೆಂಬರ್ 1 ರಿಂದ 17 ರವರೆಗೆ ಬೆಂಗಳೂರಿನಲ್ಲಿ 110 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.