Publish Date: Mon, 22 Nov 2021 (14:41 IST)
Updated Date: Mon, 22 Nov 2021 (14:46 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ (Bengaluru Rains) ಮುಂದುವರೆದಿರುವಂತೆಯೇ ನಗರದ ಹಲವು ಪ್ರದೇಶಗಳು ಜಲಾವೃತ್ತವಾಗಿದ್ದು, ಮಳೆ ಪೀಡಿತ ಪ್ರದೇಶಗಳಲ್ಲಿ ಇಂದು ಬಿಬಿಎಂಪಿ (BBMP) ಆಯುಕ್ತ ಗೌರವ್ ಗುಪ್ತ (Gaura Gupta) ಪರಿಶೀಲನೆ ನಡೆಸಿದರು.ಬೆಂಗಳೂರಿನ ಯಲಹಂಕ (Yelahanka), ಚಿಕ್ಕಬಳ್ಳಾಪುರ ಮುಖ್ಯ ರಸ್ತೆ, ಅಲ್ಲಾಳಸಂದ್ರ, ಕೋಗಿಲು ಕ್ರಾಸ್ (Kogilu Corss), ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆ (KIA Main Road), ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ (Kendriya Vihar apartment) ನಿಂದ ವೆಂಕಟಾಲ ಗ್ರಾಮದವರೆಗಿನ ಹಲವು ಪ್ರದೇಶಗಳು ಜಲಾವೃತವಾಗಿವೆ.