Select Your Language

Notifications

webdunia
webdunia
webdunia
webdunia

ಭಾನುವಾರ ವಿರಾಮ ನೀಡಿದ ಮಳೆ

Rain that gave a break on Sunday
bangalore , ಭಾನುವಾರ, 21 ನವೆಂಬರ್ 2021 (21:18 IST)
ಬೆಂಗಳೂರು: ರಾಜ್ಯಾದ್ಯಂತ ಕಳೆದ ಐದಾರು ದಿನಗಳಿಂದ ಬೀಳುತ್ತಿದ್ದ ಜಿಟಿ ಜಿಟಿ ಮಳೆ ಭಾನುವಾರ ವಿರಾಮ ನೀಡಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಾತ್ರ ಚದುರಿದ ಮಳೆಯಾಗಿದೆ.
ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದಿಂದ ಜಿಟಿ ಜಿಟಿ ಮಳೆಯಾಗುತ್ತಿದೆ. ಒತ್ತಡದ ಗಾಳಿ ತಗ್ಗಿದ್ದು, ಮಳೆ ಇಳಿಮುಖವಾಗಿದೆ.
ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಸೋಮವಾರ ಮತ್ತು ಮಂಗಳವಾರ ಚದುರಿದ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಛಾಪಾ ಕಾಗದ ಮಾರುತ್ತಿದ್ದ ಆರೋಪಿಗಳನ್ನು ಬಂಧನ