Select Your Language

Notifications

webdunia
webdunia
webdunia
webdunia

ಬೆಂಗಳೂರು ನಗರ ಜಿಲ್ಲೆಯ ಕಸಾಪ ಚುನಾವಣೆ ಫಲಿತಾಂಶ

ಬೆಂಗಳೂರು ನಗರ ಜಿಲ್ಲೆಯ ಕಸಾಪ ಚುನಾವಣೆ ಫಲಿತಾಂಶ
bangalore , ಸೋಮವಾರ, 22 ನವೆಂಬರ್ 2021 (20:29 IST)
ಬೆಂಗಳೂರು: ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕನ್ನಡ ನಾಡು ನುಡಿಯ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಯಾವುದೇ ರಾಜಕೀಯ ಚುನಾವಣೆಗಿಂತ ಭಿನ್ನವಾಗಿರಲಿಲ್ಲ. ಕನ್ನಡ ಸಾಹಿತ್ಯದಲ್ಲಿ ರಾಜಕೀಯ ನುಸಿರಿರುವ ಬೇಸರ, ಅಸಮಾಧಾನ, ಆಕ್ರೋಶದ ಜೊತೆಗೆ ಚುನಾವಣೆ ಸರಾಗವಾಗಿ ನೆಡೆದು ಫಲಿತಾಂಶ ಹೊರಬಿದ್ದಿದೆ.
 
ನಿನ್ನೆ( ಭಾನುವಾರ) ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಕೋಟ್ಯಾಂತರ ರೂ ಖರ್ಚು ಮಾಡಲಾಗಿದೆ. ಮೂರರಿಂದ ಐದು ವರ್ಷಗಳಿಗೆ ವಿಸ್ತರಣೆಗೊಂಡ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು. 
 
ಜಿಲ್ಲಾಮಟ್ಟದ ಅಧ್ಯಕ್ಷರ ಫಲಿತಾಂಶ ನಿನ್ನೆ ತಡ ರಾತ್ರಿಯಿಂದ ಒಂದಾಗಿ ಹೊರಬಿದ್ದಿದ್ದೆ.
 
ಮೂರನೇ ಯತ್ನದಲ್ಲಿ ಗೆದ್ದು ಬೀಗಿದ ಪ್ರಕಾಶ್ ಮೂರ್ತಿ: 
 
 
ರಾಜ್ಯದ ಹೆಚ್ಚಿನ ಮತದಾರರನ್ನು ಹೊಂದಿರುವ ಹೆಗ್ಗಳಿಕೆ ಬೆಂಗಳೂರು ನಗರ ಜಿಲ್ಲೆ. ಎಲ್ಲಾ ಜಿಲ್ಲೆಗಳು ತುಂಬಾ ಪ್ರತಿಷ್ಟಿತವಾದ ಜಿಲ್ಲೆಯಾಗಿದೆ. ಉಳಿದಜಿಲ್ಲೆ ಇಲ್ಲ ಪೈಪೋಟಿ,ಹಣಾಹಣಿ ರೋಚಕತೆ ಇತ್ತು.
 
ಕಳೆದ ಹಾಗೂ ಅದಕ್ಕೂ ಹಿಂದಿನ ಬಾರಿಯ ಪರಾಜಿತ ಅಭ್ಯರ್ಥಿ ಎಂ.ಪ್ರಕಾಶ ಮೂರ್ತಿ ಈ ಬಾರಿ ಅನಾಯಾಸ ಗೆಲವನ್ನು ದಕ್ಕಿಸಿಕೊಂಡರು. ಎಂ. ತಿಮ್ಮಯ್ಯ ಹಾಗೂ ಎಂ. ಪ್ರಕಾಶ ಮೂರ್ತಿ ನೇರ ಹಣಾಹಣಿಯಲ್ಲಿ ಬೆಂಗಳೂರು ನಗರ ಜಿಲ್ಲೆ ಒಟ್ಟು 10,538 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಎರಡು ಬಾರಿ ಇದ್ದ ಎಂ. ತಿಮ್ಮಯ್ಯ ಮೂರನೇ ಬಾರಿ ಸೋಲುವಂತಾಯಿತು. ಇದು ತನ್ನ ಕೊನೆಯ ಸೆಣಸಾಟ ಎಂದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಾನಿಗೊಳಗಾದ ಪ್ರದೇಶಗಳಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಭೇಟಿ, ಪರಿಶೀಲನೆ