Select Your Language

Notifications

webdunia
webdunia
webdunia
webdunia

ಮಳೆಗಾಲ ಮುಗಿಯೋವರೆಗೆ ಬೆಂಗ್ಳೂರಿನಲ್ಲಿ ಅಂಡರ್ಪಾಸ್ ಬಂದ್..?

ಮಳೆಗಾಲ ಮುಗಿಯೋವರೆಗೆ ಬೆಂಗ್ಳೂರಿನಲ್ಲಿ ಅಂಡರ್ಪಾಸ್ ಬಂದ್..?
ಬೆಂಗಳೂರು , ಮಂಗಳವಾರ, 23 ಮೇ 2023 (08:47 IST)
ಬೆಂಗಳೂರು : ನಗರದ ಕೆ.ಆರ್ ಸರ್ಕಲ್ ಅಂಡರ್ಪಾಸ್ ದುರಂತಕ್ಕೆ ನಿರ್ಲಕ್ಷ್ಯವೇ ಕಾರಣ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಬೆಂಗಳೂರಿನ ಅಂಡರ್ಪಾಸ್ಗಳ ಸ್ಥಿತಿಗತಿಯ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.
 
ಮಳೆ ಅನಾಹುತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಮಳೆಗಾಲ ಮುಗಿಯುವವರೆಗೆ ಸಮಸ್ಯೆಗಳು ಇರುವ ಎಲ್ಲಾ ಅಂಡರ್ಪಾಸ್ ಬಂದ್ ಮಾಡುವ ನಿರ್ಣಯಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ನಗರದ ಯಾವ್ಯಾವ ಅಂಡರ್ಪಾಸ್ ಸುರಕ್ಷತೆಯಿಂದ ಕೂಡಿಲ್ಲ. ಅವುಗಳ ಬಗ್ಗೆ ವರದಿ ನೀಡುವಂತೆ ಮುಖ್ಯ ಎಂಜಿನಿಯರ್ಗೆ ಸೂಚಿಸಿದೆ. 

ನಗರದಲ್ಲಿ 20ಕ್ಕೂ ಹೆಚ್ಚು ಅಂಡರ್ಪಾಸ್ಗಳು ನಿರ್ವಹಣೆ ಕೊರತೆಯಿಂದ ಡೇಂಜರ್ ಜೋನ್ನಲ್ಲಿವೆ. ಸಣ್ಣ ಮಳೆ ಬಂದರೂ ಅಂಡರ್ಪಾಸ್ಗಳು ಕೆರೆಯಂತಾಗುತ್ತಿವೆ. ಸದ್ಯ ವಿಂಡ್ಸರ್ ಮ್ಯಾನರ್ ಬಳಿಯ ಅಂಡರ್ಪಾಸ್ನಲ್ಲಿ ನೀರು ನಿಂತಿದ್ದು, ಇಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ?