Select Your Language

Notifications

webdunia
webdunia
webdunia
webdunia

ಮಳೆಗಾಲದಲ್ಲಿ ತ್ವಚೆಯ ಅಂದ ಕಾಪಾಡ್ಕೊಳ್ಳೋದು ಹೇಗೆ ಎಂಬ ಚಿಂತೆ ಕಾಡ್ತಿದ್ಯಾ? ಮ್ಯಾಜಿಕ್ ಪರಿಹಾರ

ಮಳೆಗಾಲದಲ್ಲಿ ತ್ವಚೆಯ ಅಂದ ಕಾಪಾಡ್ಕೊಳ್ಳೋದು ಹೇಗೆ ಎಂಬ ಚಿಂತೆ ಕಾಡ್ತಿದ್ಯಾ? ಮ್ಯಾಜಿಕ್ ಪರಿಹಾರ
ನವದೆಹಲಿ , ಸೋಮವಾರ, 8 ಆಗಸ್ಟ್ 2022 (15:00 IST)
ಮಳೆಗಾಲದಲ್ಲಿ ಸಾಮಾನ್ಯವಾಗಿ ತಣ್ಣನೆಯ ನೀರು ಬಳಕೆ ಕಡಿಮೆ ಮಾಡುತ್ತೇವೆ. ಮುಖ ತೊಳೆದ ನಂತರ ಯಾವುದಾದರೂ ಮೊಯ್ಚರೈಸರ್ ಕ್ರೀಮ್ ಬಳಕೆ ಮಾಡಿ.

ಸ್ವಲ್ಪ ಕ್ರೀಮ್ ತೆಗೆದುಕೊಂಡು ಅದನ್ನು ಮುಖಕ್ಕೆ ತೆಳ್ಳಗೆ ಹಚ್ಚಿ ಬಿಡಿ. ಇದನ್ನು ಕೇವಲ ಬೆಳಗ್ಗೆ ಮಾತ್ರವಲ್ಲ, ರಾತ್ರಿ ಮಲಗುವಾಗ ಸಹ ಮಾಡಬಹುದು.

ನಿಮಗೆ ರಜೆ ದಿನಗಳಲ್ಲಿ ಸಮಯ ಸಿಕ್ಕಾಗ ಲವಂಗ ಪುಡಿ ಮಾಡಿಕೊಂಡು ಅದಕ್ಕೆ ಬೇವಿನ ಎಲೆ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಅಗತ್ಯ ಬಿದ್ದರೆ ರೋಸ್ ವಾಟರ್ ಸಹ ನೀವು ಸೇರಿಸಬಹುದು. ಈ ಮಿಶ್ರಣವನ್ನು ಮುಖಕ್ಕೆ ಮಾಸ್ಕ್ ರೀತಿ ಹಚ್ಚಿ, ಒಂದು ಗಂಟೆಯ ನಂತರ ತೊಳೆಯಿರಿ.
webdunia


ಓಟ್ಸ್ ಮೀಲ್ ಕೇವಲ ತೂಕ ಇಳಿಸಲು ಮಾತ್ರವಲ್ಲ, ತ್ವಚೆಯ ಅಂದ ಕಾಪಾಡಲು ಸಹ ಸಹಾಯ ಮಾಡುತ್ತದೆ. ಸ್ವಲ್ಪ ಓಟ್ಸ್ ತೆಗೆದುಕೊಂಡು ಅದಕ್ಕೆ ಜೇನು ತುಪ್ಪ ಹಾಕಿ ಕಲಸಿ ಹಚ್ಚಿಕೊಳ್ಳಿ. 5 ನಿಮಿಷಗಳ ನಂತರ ಅದನ್ನು ಸ್ಕ್ರಬ್ ರೀತಿಯಾಗಿ ಉಜ್ಜಿ ಸುಮಾರು 30 ನಿಮಿಷ ಹಾಗೆಯೇ ಬಿಟ್ಟು, ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಬೇವಿನ ಎಲೆಯ ಪ್ರಯೋಜನಗಳ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಇದು ಹಲವಾರು ರೀತಿಯಲ್ಲಿ ಉಪಯೋಗ ನೀಡುತ್ತದೆ. ಮಳೆಗಾಲದಲ್ಲಿ ಬೆಳಗ್ಗೆ ಬೇವಿನ ಪುಡಿಗೆ ರೋಸ್ ವಾಟರ್ ಸೇರಿಸಿ ಮಾಸ್ಕ್ ರೀತಿ ಹಚ್ಚುವುದು ಚರ್ಮದಲ್ಲಿ ಧೂಳಿನ ಕಣಗಳನ್ನು ತೆಗೆಯಲು ಸಹಾಯ ಮಾಡುತ್ತದೆ.

ಕಿತ್ತಳೆ ಹಣ್ಣು ತಿಂದು ಸಾಮಾನ್ಯವಾಗಿ ನಾವು ಸಿಪ್ಪೆಯನ್ನು ಬಿಸಾಕಿ ಬಿಡುತ್ತೇವೆ. ಆದರೆ ಅದರ ಬದಲು ಅದರಿಂದ ತ್ವಚೆಗೆ ಪ್ರಯೋಜನ ಪಡೆಯಿರಿ. ನೀವು ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಅದಕ್ಕೆ ಮುಲ್ತಾನಿ ಮಿಟ್ಟಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ಬಿಟ್ಟು ಮ್ಯಾಜಿಕ್ ನೋಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೌಂದರ್ಯಕ್ಕೂ ಸೈ, ಆರೋಗ್ಯಕ್ಕೂ ಸೈ..!