Publish Date: Tue, 23 May 2023 (08:38 IST)
Updated Date: Tue, 23 May 2023 (09:21 IST)
ಎಲ್ಲೆಲ್ಲಿ ಮರ ಬಿದ್ದಿದೆ ಅದನ್ನ ತಕ್ಷಣವೇ ತೆರವು ಮಾಡಿ. ತಕ್ಷಣವೇ ಟ್ರಾಫಿಕ್ ಕ್ಲಿಯರ್ ಮಾಡಲಿ ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಿದರು.
ನೀರು ನುಗ್ಗಿರೋ ಮನೆಗಳಿಗೆ ಕೂಡಲೇ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಪರಿಹಾರ ಮಾಡಬೇಕು. ವಸತಿ ಸಮಸ್ಯೆ ಆಗಿರೋರಿಗೆ ತಕ್ಷಣವೇ ತಾತ್ಕಾಲಿಕ ವ್ಯವಸ್ಥೆ ಮಾಡಿ. ಹೂಳು ತುಂಬಿರೋ ರಾಜಕಾಲುವೆಗಳನ್ನ ಹುಡುಕಿ ಕೂಡಲೇ ಹೂಳೆತ್ತಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ.
ಯಾವ ಭಾಗದಿಂದ ದೂರು ಬರುತ್ತೆ ತಕ್ಷಣವೇ ಅಲ್ಲಿಗೆ ತೆರಳಿ ಸಮಸ್ಯೆ ಪರಿಹಾರ ಮಾಡಿ. ಬಿಬಿಎಂಪಿ ಸಹಾಯವಾಣಿ ಆಕ್ಟೀವ್ ಆಗಿ ಇರುವಂತೆ ನೋಡಿಕೊಳ್ಳಿ. ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಾರದು ಎಂದು ಬಿಬಿಎಂಪಿ ಆಯುಕ್ತ, ನಗರ ಪೆÇಲೀಸ್ ಆಯುಕ್ತರಿಗೆ ಸಿಎಂ ಸೂಚನೆ ನೀಡಿದರು.