ಬೆಂಗಳೂರು : ಓಮಿಕ್ರಾನ್ ವೈರಸ್ ಭೀತಿ ಜಗತ್ತನ್ನು ಹಿಂಡಿ ಹಿಪ್ಪೆ ಮಾಡಿದೆ.
ಡೆಲ್ಟಾ ಅಬ್ಬರಕ್ಕೆ ಮರಣಮೃದಂಗ ಬಾರಿಸಬಾರದು ಎಂದು ಎಲ್ಲ ದೇಶಗಳು, ಎಲ್ಲ ರಾಜ್ಯಗಳು ಕಟ್ಟೆಚ್ಚರ ವಹಿಸುತ್ತಿದ್ದು, ಹತ್ತು ಹಲವು ರೀತಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿವೆ.”
ಓಮಿಕ್ರಾನ್ ಕುರಿತು ರಾಜ್ಯದಲ್ಲಿಯೂ ಈಗಾಗಲೇ ಹಲವು ಮಾರ್ಗಸೂಚಿ ಜಾರಿಯಾಗಿವೆ. ಆದರೂ ಎರಡನೇ ಡೋಸ್ ಲಸಿಕೆ ಪಡೆಯಲು ಜನ ಹಿಂದೇಟು ಹಾಕಿದ್ದಾರೆ. ಹೀಗಾಗಿ ಎಲ್ಲರೂ ಲಸಿಕೆ ಪಡೆಯುವಂತೆ ಮಾಡಲು ಕಠಿಣ ನಿಯಮಗಳನ್ನು ಜಾರಿ ಮಾಡಿ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಲಸಿಕೆ ಪಡೆಯದಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಡಿ. ಸಿಂಗಾಪುರ ಮಾದರಿಯಲ್ಲಿ ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ಕೊಡ್ಬೇಡಿ. ಅಷ್ಟೇ ಅಲ್ಲ, ಲಸಿಕೆ ಪಡೆಯದವರ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಸಹ ಹಾಕದಿರುವ ರೀತಿಯ ಟಫ್ ರೂಲ್ಸ್ ತನ್ನಿ. ಆಗ ಮಾತ್ರ ಶೇಕಡಾ 100ರಷ್ಟು ವ್ಯಾಕ್ಸಿನೇಷನ್ ಟಾರ್ಗೆಟ್ ಮುಟ್ಟಲು ಸಾಧ್ಯ ಎಂದು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.