Select Your Language

Notifications

webdunia
webdunia
webdunia
webdunia

ಓಮಿಕ್ರಾನ್ ಸೋಂಕಿಗೆ ಪ್ರತ್ಯೇಕ ಆಸ್ಪತ್ರೆ!

ಓಮಿಕ್ರಾನ್ ಸೋಂಕಿಗೆ ಪ್ರತ್ಯೇಕ ಆಸ್ಪತ್ರೆ!
ನವದೆಹಲಿ , ಮಂಗಳವಾರ, 30 ನವೆಂಬರ್ 2021 (11:44 IST)
ನವದೆಹಲಿ : ಓಮಿಕ್ರಾನ್ ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆಯನ್ನು ದೆಹಲಿ ಸರ್ಕಾರ ನಿಗದಿಪಡಿಸಿದೆ.
ಓಮಿಕ್ರಾನ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸೋಂಕಿತ ರೋಗಿಗಳನ್ನು ಪ್ರತ್ಯೇಕಿಸಲು ಮತ್ತು ಚಿಕಿತ್ಸೆ ನೀಡಲು ದೆಹಲಿ ಸರ್ಕಾರ ಈಗಾಗಲೇ ಪ್ರತೇಕ ವಾರ್ಡ್ಗಳನ್ನು ನಿಗದಿಪಡಿಸಲು ಆಸ್ಪತ್ರೆಗೆ ಸೂಚಿಸಲಾಗಿದೆ.
ಹೊಸ ರೂಪಾಂತರಿ ವೈರಸ್ ತಗುಲಿದ ಯಾವುದೇ ರೋಗಿಗೆ ಯಾವುದೇ ಕಾರಣಕ್ಕೂ ಪ್ರವೇಶ ನಿರಾಕರಿಸಲಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಹೊಸ ರೂಪಾಂತರಿ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ತೀವ್ರ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಭಾನುವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. 
ಮಾರ್ಗಸೂಚಿಗಳ ಪ್ರಕಾರ, ಓಮಿಕ್ರಾನ್ ಪಾಸಿಟಿವ್ ದೃಢಪಡುವ ರೋಗಿಗಳಿಗೆ ಪ್ರತ್ಯೇಕ ಘಟಕವನ್ನು ಸ್ಥಾಪಿಸಬೇಕು ಎಂದು ಹೇಳಿದೆ. ಅದರ ಪ್ರಕಾರ ದೆಹಲಿ ಸರ್ಕಾರ ಲೋಕನಾಯಕ ಆಸ್ಪತ್ರೆಯನ್ನು ಹೊಸ ರೂಪಾಂತರಿ ಸೋಂಕಿತರಿಗಾಗಿ ನಿಗದಿಪಡಿಸಲಾಗಿದೆ. ದೇಶಗಳಿಂದ ಬರುವ ಎಲ್ಲಾ ಜನರಿಗೆ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯ ಮತ್ತು ಪ್ರತ್ಯೇಕವಾಗಿ ಕ್ವಾರಂಟೈನ್ ಆಗುವಂತೆ ಆದೇಶಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧಾಶ್ರಮ ಕಂಟೈನ್ಮೆಂಟ್ ಝೋನ್ ಆಗಿದ್ದಾದ್ರು ಯಾಕೆ?