Publish Date: Fri, 19 May 2023 (11:14 IST)
Updated Date: Fri, 19 May 2023 (09:56 IST)
ಸಿಇಟಿ ಪರೀಕ್ಷೆ ನಡೆಯಲಿರುವ ಮೊದಲ ದಿನ ಶನಿವಾರದಂದೇ ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಈ ಹಿನ್ನೆಲೆ ರಾಜ್ಯ ಹಾಗೂ ರಾಜಧಾನಿಯ ಮೂಲೆ ಮೂಲೆಗಳಿಂದ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಬರುವ ಸಾಧ್ಯತೆ ಇರುವುದರಿಂದ ನಗರದಲ್ಲಿ ಟ್ರಾಫಿಕ್ ಆಗುವ ಸಾಧ್ಯತೆಯಿದೆ. ಇದೀಗ ಸಿಇಟಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ ಬೆಂಗಳೂರಿನ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಟ್ರಾಫಿಕ್ ಜಾಮ್ನ ಭೀತಿ ಎದುರಾಗಿದೆ.