Select Your Language

Notifications

webdunia
webdunia
webdunia
webdunia

ಜಲ್ಲಿಕಟ್ಟುಗೆ ಸುಪ್ರೀಂ ಅನುಮತಿ : ಕಂಬಳಕ್ಕೂ ಗ್ರೀನ್ ಸಿಗ್ನಲ್

ಜಲ್ಲಿಕಟ್ಟುಗೆ ಸುಪ್ರೀಂ ಅನುಮತಿ : ಕಂಬಳಕ್ಕೂ ಗ್ರೀನ್ ಸಿಗ್ನಲ್
ನವದೆಹಲಿ , ಸೋಮವಾರ, 22 ಮೇ 2023 (12:22 IST)
ನವದೆಹಲಿ : ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ತಮಿಳುನಾಡು ಸರ್ಕಾರ ಮಾಡಿರುವ ತಿದ್ದುಪಡಿಯ ಸಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಈ ಮೂಲಕ ಎತ್ತುಗಳನ್ನು ಬಳಸಿ ನಡೆಸಲಾಗುವ ಜಲ್ಲಿಕಟ್ಟು ಕ್ರೀಡೆಯ ಜೊತೆಗೆ ಕಂಬಳಕ್ಕೂ ಇದ್ದ ಕಂಟಕ ನಿವಾರಣೆಯಾಗಿದೆ. ನ್ಯಾಯಮೂರ್ತಿ ಕೆ.ಎಂ.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಸಂವಿಧಾನ ಪೀಠವು ಎತ್ತುಗಳ ನೋವು ಮತ್ತು ಸಂಕಟವನ್ನು ಕಡಿಮೆ ಮಾಡಲು ಕಾಯ್ದೆಯ ತಿದ್ದುಪಡಿ ಮಾಡಲಾಗಿದೆ.

ನಿಯಮದ ಅನುಸಾರ ಜಲ್ಲಿಕಟ್ಟು ಮುಂದುವರೆಸಬಹುದು ಎಂದು ಅಭಿಪ್ರಾಯಪಟ್ಟಿದೆ.  ರಾಜ್ಯದ ಕಾಯ್ದೆಯಲ್ಲಿ ಯಾವುದೇ ಲೋಪವಿಲ್ಲ. ನಿಯಮಗಳ ಪ್ರಕಾರ ಭಾಗವಹಿಸುವಿಕೆಯನ್ನು ಅನುಮತಿಸಲಾಗುವುದು.

ಕಾಯ್ದೆಯೂ ಸಂವಿಧಾನದ 48 ನೇ ವಿಧಿ ಗೋಹತ್ಯೆ ವಿಚಾರಕ್ಕೆ ಇದು ಸಂಬಂಧಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಡೆಸಲಾಗುವ ಕಂಬಳ ಮತ್ತು ಎತ್ತಿನ ಬಂಡಿ ಓಟಕ್ಕೂ ಅನುಮತಿಸುವ ಕಾನೂನನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ಈ ಮೇಲೆ ಉಲ್ಲೇಖಿಸಲಾದ ಕ್ರೀಡೆಗಳು, ಆರ್ಟಿಕಲ್ 51ಎ(ಜಿ) ಎಲ್ಲಾ ಜೀವಿಗಳ ಮೇಲೆ ಸಹಾನೂಭೂತಿ ಹೊಂದಿರುವುದು ಮತ್ತು 51ಎ(ಹೆಚ್) ಹಿಂಸೆಯನ್ನು ನಡೆಸದೇ ಇರುವುದನ್ನು ಉಲ್ಲಂಘಿಸುವುದಿಲ್ಲ.

ಹೀಗಾಗಿ ಭಾರತದ ಸಂವಿಧಾನದ 14 ಮತ್ತು 21 ನೇ ವಿಧಿಗಳಲ್ಲಿನ ಮೂಲಭೂತ ಹಕ್ಕುಗಳನ್ನು ಇದು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ ತಿದ್ದುಪಡಿ ಮಾಡಲಾದ ಕಾಯಿದೆಗಳು ಹಾಗೂ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಈ ಅನುಷ್ಠಾನ ಜಿಲ್ಲಾಧಿಕಾರಿಗಳ ಜವಬ್ದಾರಿಯಾಗಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಜನತೆ ಕರೆಂಟ್ ಬಿಲ್ ಕಟ್ಟಬೇಡಿ , ಕೇಳಿದ್ರೆ ಸಿಎಂಗೆ ಕಳಿಸಿ : ಸಿಟಿ ರವಿ