Publish Date: Fri, 05 Nov 2021 (15:53 IST)
Updated Date: Fri, 05 Nov 2021 (15:55 IST)
ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ರು.
ಇನ್ನು ಮೈಸೂರು ರಸ್ತೆ, ಬನಶಂಕರಿ, ಚಂದ್ರಾಲೇಔಟ್, ವಿಜಯನಗರ, ಮಾಗಡಿ ರಸ್ತೆ, ಸುಂಕದಕಟ್ಟೆ, ಯಶವಂತಪುರ, ನಾಗರಬಾವಿ, ಶಾಂತಿನಗರ, ಆಸ್ಟಿನ್ಟೌನ್ ಸೇರಿದಂತೆ ಹಲವು ಬಡಾವಣೆಗಳ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದವು, ಇನ್ನು ನೀರು ನಿಂತ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದೆ ಜನರು ಪರದಾಡುವಂತಾಯಿತು. ವ್ಯಾಪಕ ಮಳೆ ಸುರಿದ ಕಾರಣ ಬಹುತೇಕ ತಗ್ಗು ಪ್ರದೇಶದ ರಸ್ತೆಗಳು ಜಲಾವೃತಗೊಂಡವು. ಧಾರಾಕಾರ ಸುರಿದ ಮಳೆ ನೀರಿನಿಂದ ರಸ್ತೆಗಳು ಕೆರೆಯಂತಾಗಿದ್ದವು.