ನೈಸ್ ರಸ್ತೆಯು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ನಿಂದ ನಿರ್ಮಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಖಾಸಗಿ ಎಕ್ಸ್ಪ್ರೆಸ್ ವೇ ಆಗಿದೆ. ಆರು ಪಥಗಳ ಖಾಸಗಿ ಎಕ್ಸ್ಪ್ರೆಸ್ ವೇ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕಿಸುತ್ತದೆ.
ಈ ಹಿಂದೆ ಕಳೆದ ವರ್ಷ ಜುಲೈನಲ್ಲಿ ನೈಸ್ ರಸ್ತೆಯಲ್ಲಿ ಬಾರಿಗೆ ಟೋಲ್ ದರವನ್ನು ಹೆಚ್ಚಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳಿಂದಾಗಿ ನೈಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ ಎಂದು ವರದಿಯಾಗಿದೆ.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ದರವನ್ನು ಹೆಚ್ಚಿಸಿದ ಒಂದು ತಿಂಗಳ ನಂತರ ನೈಸ್ ರಸ್ತೆಯಲ್ಲಿ ಟೋಲ್ ದರಗಳು ಏರಿಕೆಯಾಗಿವೆ. ಜೂನ್ 1 ರಿಂದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ದರವನ್ನು ಶೇಕಡಾ 22 ರಷ್ಟು ಹೆಚ್ಚಿಸಲಾಗಿದೆ. ಟೋಲ್ ದರಗಳ ಪರಿಷ್ಕರಣೆ ನಂತರ ಎಕ್ಸ್ಪ್ರೆಸ್ ವೇನಲ್ಲಿ ಒಂದು ಬದಿಯ ಪ್ರಯಾಣದ ವೆಚ್ಚವು 135 ರಿಂದ 165 ಕ್ಕೆ ಏರಿಕೆಯಾಗಿದೆ.