Publish Date: Wed, 18 May 2022 (09:11 IST)
Updated Date: Wed, 18 May 2022 (09:12 IST)
ಬೆಂಗಳೂರು : ಗೊಂದಲದ ಗೂಡಾಗಿ ತಾತ್ಕಾಲಿಕವಾಗಿ ನಿಂತಿರುವ ಟೋಯಿಂಗ್ ಮರು ಜೀವ ನೀಡಲು ಹೊಸ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಚಿಂತನೆಯಲ್ಲಿದ್ದಾರೆ.
ಶೀಘ್ರದಲ್ಲೇ ಟೋಯಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಂಡು ಪುನಃ ಟೋಯಿಂಗ್ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತವೆ.
ಟೋಯಿಂಗ್ ಸಮಸ್ಯೆ ಬಗ್ಗೆ ಸರ್ಕಾರದ ಜೊತೆ ಮಾತನಾಡಿ ಶೀಘ್ರದಲ್ಲೇ ಹೊಸ ಮಾರ್ಗಸೂಚಿಯೊಂದಿಗೆ ಪ್ರಾರಂಭ ಮಾಡಲಾಗುವುದೆಂದು ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದಲ್ಲಿ ಎಲ್ಲಾ ಚಟುವಟಿಕೆಗಳು ಮಾಮೂಲಿಯಂತೆ ನಡೆಯುತ್ತಿರುವದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.
Ramya kosira
Publish Date: Wed, 18 May 2022 (09:11 IST)
Updated Date: Wed, 18 May 2022 (09:12 IST)