Publish Date: Sat, 13 May 2023 (13:59 IST)
Updated Date: Sat, 13 May 2023 (14:01 IST)
ಮೈಸೂರು : ಈ ಚುನಾವಣೆ ಲೋಕಾಸಭಾ ಚುನಾವಣೆಗೆ ದಿಕ್ಸೂಚಿ. ಎಲ್ಲಾ ಪ್ರಚಾರ ಸಭೆಗಳಲ್ಲೂ ಹೇಳಿದ್ದೇನೆ.
ಸುಮಾರು 130 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಕಾಂಗ್ರೆಸ್ ಪಾರ್ಟಿ ತನ್ನ ಶಕ್ತಿ ಮೇಲೆ ಸರ್ಕಾರ ಮಾಡುತ್ತದೆ. ಜನರು ಬದಲಾವಣೆ ಬಯಸಿದ್ದಾರೆ. 40 ಪರ್ಸೆಂಟ್ ಭ್ರಷ್ಟಾಚಾರ, ಬಿಜೆಪಿ ಸರ್ಕಾರದ ವಿರುದ್ದ ಕೆಂಪಣ್ಣ ಧ್ವನಿ ಎತ್ತಿದ್ದರು.
ರಾಜ್ಯದ ಜನ ಬೇಸತ್ತು, ಬಿಜೆಪಿ ತೊಲಗಲಿ ಎಂದು ಪಾಠ ಕಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಎಲ್ಲರಿಗೂ ಗೊತ್ತಿದ್ದರೂ. ಸುಳ್ಳು ಹೇಳುತ್ತಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.