Publish Date: Sat, 13 May 2023 (13:28 IST)
Updated Date: Sat, 13 May 2023 (13:24 IST)
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತೀ ದೊಡ್ಡ ಗೆಲುವಿನ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದೆ. ಈ ಬಾರಿ ಅಧಿಕಾರದ ಚುಕ್ಕಾಣೆ ಹಿಡಿಯುವಷ್ಟು ಮತದಾರ ಪಕ್ಷವನ್ನು ಕೈ ಹಿಡಿದಿದ್ದಾನೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ ಗೆಲ್ಲಿಸಿದ್ದಕ್ಕೆ ಕರ್ನಾಟಕ ಜನತೆಗೆ ಧನ್ಯವಾಗಳನ್ನು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಜನರು ಒಳ್ಳೆ ಕೆಲಸ ಮಾಡಿದರೆ ಒಳ್ಳೆಯವರ ಕೈ ಹಿಡಿತಾರೆ. ಸೋಲಲಿ ಗೆಲ್ಲಲಿ ಜನರ ಮಧ್ಯೆ ಇರಬೇಕು. ಇದು ಕೇವಲ ಒಬ್ಬರ ಗೆಲುವಲ್ಲ, ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದಾರೆ. ಹಾಗಾಗಿ ಗೆದ್ದಿದ್ದೇವೆ. ಜೊತೆಗೆ ನಮ್ಮ ಗ್ಯಾರಂಟಿ ಕೂಡ ಕೆಲಸ ಮಾಡಿದೆ. ಗ್ಯಾರಂಟಿಗಳಿಗೆ ಜನ ಸ್ಪಂದಿಸಿದ್ದಾರೆ ಎಂದರು.