Select Your Language

Notifications

webdunia
webdunia
webdunia
webdunia

ಕ್ಯಾಡ್ಬರಿ ಚಾಕ್ಲೇಟ್ನಲ್ಲಿ ದನದ ಮಾಂಸ ಬಳಕೆ !

ಕ್ಯಾಡ್ಬರಿ ಚಾಕ್ಲೇಟ್ನಲ್ಲಿ ದನದ ಮಾಂಸ ಬಳಕೆ !
Bangalore , ಮಂಗಳವಾರ, 20 ಜುಲೈ 2021 (16:00 IST)
Cadbury Chocolate ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರ ಫೇವರೆಟ್ ಚಾಕ್ಲೇಟ್. ಬಾಯಿ ಸಿಹಿ ಮಾಡೋಣ ಎಂಬ ಜಾಹೀರಾತು ಕಂಡೊಡನೆ ತಿನ್ನಬೇಕು ಅನಿಸದೆ ಇರಲ್ಲ. ಬಾಯಲ್ಲಿ ಇಟ್ಟೊಡನೆ ಕರಗುವ ಚಾಕ್ಲೇಟ್ಗೆ ಎಲ್ಲಿಲ್ಲದ ಬೇಡಿಕೆ. ಮಾರುಕಟ್ಟೆಯಲ್ಲಿ ಎಷ್ಟೇ ಬ್ರ್ಯಾಂಡ್ಗಳ ಚಾಕ್ಲೇಟ್ ಬಂದರೂ ಕ್ಯಾಡ್ಬರಿ ಡೈರಿ ಮಿಲ್ಕ್ ಡಿಮ್ಯಾಂಡ್ ಎಂದಿಗೂ ಕುಗ್ಗಿಲ್ಲ.ಇನ್ನು ಕ್ಯಾಡ್ಬರಿ ಚಾಕ್ಲೇಟ್ ನೀಡಿ ಪ್ರಮೋಸ್ ಮಾಡೋದು ಫೇಮಸ್ ಐಡಿಯಾಗಳಲ್ಲಿ ಒಂದು. ನೆರಳೆ ಬಣ್ಣದ ಕವರ್ ಇರುವ ಕ್ಯಾಟ್ಬರಿಯನ್ನು ನೋಡುತ್ತಿದಂತೆ ಹುಡುಗಿಯರು ಕಣ್ಣರಳಿಸೋದು ಸತ್ಯ.

ಎಲ್ಲರ ಮನಗೆದಿದ್ದರು ಕ್ಯಾಡ್ಬರಿ ಬಗ್ಗೆ ಕಳೆದ 1 ವಾರದಿಂದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾವೆಲ್ಲಾ ತಿನ್ನುತ್ತಿರುವ ಕ್ಯಾಡ್ಬರಿ ತಯಾರಿಕೆಯಲ್ಲಿ ದನದ ಮಾಂಸ ಬಳಸಲಾಗುತ್ತಿದೆ. ಇದು ಹಿಂದೂಗಳ ಭಾವನೆಗೆ ಧಕ್ಕೆ ತರುವ ವಿಚಾರ. ಹೀಗಾಗಿ ಭಾರತದಲ್ಲಿ ಕ್ಯಾಡ್ಬರಿ ಚಾಕ್ಲೇಟ್ಗಳನ್ನು ಬ್ಯಾನ್ ಮಾಡಬೇಕು ಎಂದು boycottCadburyChocolate ಹ್ಯಾಷ್ಟ್ಯಾಗ್ನಲ್ಲಿ ಅಭಿಯಾನ ಶುರುವಾಗಿತ್ತು. ಕ್ಯಾಡ್ಬರಿಯಲ್ಲಿ ದನಸ ಮಾಂಸ ಬಳಸುತ್ತಿದ್ದಾರೆ ಎಂದು ವೆಬ್ಸೈಟ್ವೊಂದರಲ್ಲಿ ವರದಿ ಪ್ರಕಟವಾಗಿತ್ತು.
webdunia

ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಎಚ್ಚೆತ್ತುಕೊಂಡ ಕ್ಯಾಡ್ಬರಿ ಕಂಪನಿ ಸ್ಪಷ್ಟನೆ ನೀಡಿದೆ. ಹೌದು ಕ್ಯಾಡ್ಬರಿ ಚಾಕ್ಲೇಟ್ನಲ್ಲಿ ದನದ ಮಾಂಸ ಬಳಸಲಾಗಿದೆ. ಆದರೆ ಭಾರತದಲ್ಲಿ ನಾವು ಮಾರಾಟ ಮಾಡುತ್ತಿರುವ ಎಲ್ಲಾ ಚಾಕ್ಲೇಟ್ಗಳು ಶೇ.100ರಷ್ಟು ಶುದ್ಧ ಸಸ್ಯಹಾರಿ. ದನದ ಮಾಂಸ ಬಳಸಿ ಮಾಡಿರುವ ಚಾಕ್ಲೇಟ್ಗಳನ್ನು ಭಾರತದ ಮಾರುಕಟ್ಟೆಗೆ ಬಿಟ್ಟಿಲ್ಲ. ಆಸ್ಟ್ರೇಲಿಯಾ ಸೇರಿದಂತೆ ಕೆಲ ವಿದೇಶಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಭಾರತದ ಕ್ಯಾಡ್ಬರಿ ಕಂಪನಿ ಟ್ವೀಟ್ ಮೂಲಕ ತಿಳಿಸಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಎಲ್ಲಾ ವಿಧದ ಚಾಕ್ಲೇಟ್ಗಳ ಮೇಲೆ ಹಸಿರು ಚುಕ್ಕೆ ಇರುವುದನ್ನು ಗ್ರಾಹಕರು ಗಮನಿಸಬೇಕು. ಹಸಿರು ಡಾಟ್ ಇದ್ದರೆ ಅದು ಶೇ.100ರಷ್ಟು ಸಸ್ಯಹಾರಿ ಎಂದರ್ಥ. ಕೆಂಪು ಚುಕ್ಕೆ ಇದ್ದರೆ ಮಾಂಸದ ವಸ್ತುಗಳನ್ನು ಬಳಸಲಾಗಿದೆ ಎಂದರ್ಥ. ನಮ್ಮ ಯಾವ ಚಾಕ್ಲೇಟ್ ಮೇಲೂ ಕೆಂಪು ಚುಕ್ಕೆ ಇಲ್ಲ. ವರ್ಷಗಳಿಂದ ಭಾರತೀಯ ಗ್ರಾಹಕರ ಮನಗೆದ್ದಿರುವ ಕ್ಯಾಟ್ಬರಿ ಗ್ರಾಹಕರಿಗೆ ಮೋಸ ಮಾಡಿಲ್ಲ ಎಂದು ವಿವರಣೆ ನೀಡಿದ್ದಾರೆ


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 4 ತಿಂಗಳಲ್ಲೇ ಕನಿಷ್ಠಕ್ಕೆ ಕುಸಿದ ಕೊರೊನಾ