Select Your Language

Notifications

webdunia
webdunia
webdunia
webdunia

ವಿಶೇಷ ಚೇತನರಿಗೆ ವಿಶೇಷ ಅವಕಾಶ ಕಲ್ಪಿಸಿದ ಸುಪ್ರೀಂ

ವಿಶೇಷ ಚೇತನರಿಗೆ ವಿಶೇಷ ಅವಕಾಶ ಕಲ್ಪಿಸಿದ ಸುಪ್ರೀಂ
ನವದೆಹಲಿ , ಭಾನುವಾರ, 27 ಮಾರ್ಚ್ 2022 (09:05 IST)
ನವದೆಹಲಿ : ಭಾರತೀಯ ಪೊಲೀಸ್ ಸೇವೆ , ಭಾರತೀಯ ರೈಲ್ವೆ ರಕ್ಷಣಾ ಪಡೆ ಸೇವೆ  ಹಾಗೂ ದೆಹಲಿ, ದಮನ್ – ದಿಯು, ದಾದ್ರಾ – ನಗರ್ ಹವೇಲಿ,

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪ ಪೊಲೀಸ್ ಸೇವೆಗಳ, ಯುಪಿಎಸ್ಸಿ ಪರೀಕ್ಷೆಗಳಿಗೆ ಗಡುವು ಮೀರಿದ್ದರೂ ಅರ್ಜಿ ಸಲ್ಲಿಸಲು ವಿಶೇಷ ಚೇತನ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ಈ ಮೇಲಿನ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸುವ ಅವಧಿ ಗುರುವಾರವೇ ಕೊನೆಗೊಂಡಿದೆ. ಆದರೂ ತಾತ್ಕಾಲಿಕವಾಗಿ ಅರ್ಜಿಗಳನ್ನು ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಅಭಯ್ ಎಸ್. ಓಕಾ ಅವರಿದ್ದ ಪೀಠ ನಿರ್ದೇಶಿಸಿದೆ.

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಭಾರತದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಸಲಹೆಯಂತೆ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಆದೇಶ ಹೊರಡಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ನರೇದ್ರ ಮೋದಿ ವೆಬ್‍ಸೈಟ್ ಲಾಂಚ್ ?