Select Your Language

Notifications

webdunia
webdunia
webdunia
webdunia

ಅಪ್ಪ ಬೇಡ ಅಂದ್ರು ಆಸ್ತಿ ಹಕ್ಕು ಇಲ್ಲ: ಸುಪ್ರೀಂಕೋರ್ಟ್

ಅಪ್ಪ ಬೇಡ ಅಂದ್ರು ಆಸ್ತಿ ಹಕ್ಕು ಇಲ್ಲ: ಸುಪ್ರೀಂಕೋರ್ಟ್
ನವದೆಹಲಿ , ಶುಕ್ರವಾರ, 18 ಮಾರ್ಚ್ 2022 (11:43 IST)
ನವದೆಹಲಿ : ಮಗಳಿಗೆ ಅಪ್ಪ ಎನ್ನುವ ಸಂಬಂಧ ಬೇಡ ಎಂದು ಅನಿಸಿದ್ರೆ ಆಕೆಗೆ ಅವನ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಪಂಜಾಬ್-ಹರಿಯಾಣ ಹೈಕೋರ್ಟ್ನಲ್ಲಿ ಪತಿಯೊಬ್ಬ ವಿಚ್ಚೇದನ ಅರ್ಜಿಯನ್ನು ಸಲ್ಲಿಸಿದ್ದನು. ಆದರೆ ಆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಹೆಂಡತಿಯೂ ಸಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಈ ಹಿನ್ನೆಲೆ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಇವರ ವಿಚಾರಣೆಯನ್ನು ಮಾಡಿದರು. 

ಈ ನಡುವೆ ಆಕೆ ತನ್ನ ತಂದೆಯನ್ನು ಸಂಪರ್ಕ ಮಾಡಲು ಬಯಸಿಲ್ಲ. ಆಕೆಗೆ ‘ಅಪ್ಪ’ ಎನ್ನುವ ಸಂಬಂಧವೇ ಬೇಡ ಎಂದ ಮೇಲೆ ಆಕೆಯ ಜವಾಬ್ದಾರಿ ತಂದೆಯ ಮೇಲೆ ಇರುವುದಿಲ್ಲ. ಅವಳಿಗೆ ಈ ಸಂಬಂಧವೇ ಬೇಡ ಎಂದ ಮೇಲೆ ಆಕೆಯ ಶಿಕ್ಷಣ ಮತ್ತು ಮದುವೆಗೆ ತಂದೆಯಿಂದ ಹಣ ಪಡೆಯಲು ಅರ್ಹತೆ ಇರುವುದಿಲ್ಲ ಎಂದು ತೀರ್ಪು ನೀಡಿದ್ದಾರೆ.

ಮಹಿಳೆಯ ಜೀವನ ನಿರ್ವಹಣೆಗೆ ಪರಿಹಾರವಾಗಿ ತಿಂಗಳಿಗೆ 8,000 ರೂ ಮತ್ತು ಅಂತಿಮವಾಗಿ 10 ಲಕ್ಷ ರೂ. ನೀಡಬೇಕು ಎಂದು ತೀರ್ಪು ಕೊಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಪ್ರಧಾನಿಯ ಶುಭಸಂದೇಶ