Select Your Language

Notifications

webdunia
webdunia
webdunia
webdunia

ಸಂಜೆ 6 ಗಂಟೆಯಿಂದಲೇ ಎಣ್ಣೆ ಅಂಗಡಿ ಕ್ಲೋಸ್! ಓಪನ್ ಯಾವಾಗ?

ಸಂಜೆ 6 ಗಂಟೆಯಿಂದಲೇ ಎಣ್ಣೆ ಅಂಗಡಿ ಕ್ಲೋಸ್! ಓಪನ್ ಯಾವಾಗ?
ಬೆಂಗಳೂರು , ಮಂಗಳವಾರ, 9 ಮೇ 2023 (10:17 IST)
ರಾಜ್ಯದ 11 ಸಾವಿರ ಮದ್ಯದಂಗಡಿಗಳು ಕ್ಲೋಸ್ ಮಾಡಿದ್ದೇವೆ. ಇದರಿಂದ ಪ್ರತಿ ಬಾರ್ ಮಾಲೀಕರಿಗೂ ಒಂದೂವರೆ ಲಕ್ಷದಷ್ಟು ನಷ್ಟವಾಗಲಿದೆ.
 
ಚುನಾವಣೆಗೆ ಇನ್ನು 2 ದಿನ ಮಾತ್ರ ಬಾಕಿ ಇದೆ. ಆದರೆ ಪೊಲೀಸರು ಮಾತ್ರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಡಲು ಏನೇನು ಬೇಕೋ ಅದಕ್ಕೆ ತಯಾರಿ ಮಾಡ್ಕೊಂಡಿದ್ದಾರೆ. ಮೊದಲ ಹಂತ ಅಂದರೆ ಮದ್ಯ ಮಾರಾಟ ನಿಷೇಧ. ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ.

ಇಂದಿನಿಂದ ಮುಂದಿನ 3 ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಿ ನಿರ್ಧಾರ ಮಾಡಲಾಗಿದೆ. ಚುನಾವಣೆಗೆ ಯಾವುದೇ ಅಡೆತಡೆಗಳು ಆಗದಂತೆ ಚುನಾವಣಾ ಆಯೋಗ ಮದ್ಯದ ಅಂಗಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಎಲೆಕ್ಷನ್ ಮುಗಿಯುವ ತನಕ ಡ್ರೈ ಡೇ ಆಚರಿಸಲು ಸೂಚನೆ ನೀಡಲಾಗಿದೆ.

ಮೇ 8ರ ಸಂಜೆ 6 ಗಂಟೆಯಿಂದ ಮೇ 11 ರ ಬೆಳಗ್ಗೆ 6 ಗಂಟೆಯವರೆಗೂ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಈ ಕುರಿತಾಗಿ ಒಂದು ವಾರದ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಇಂದು 6 ಗಂಟೆಯ ನಂತರ ಮದ್ಯದಂಗಡಿಗಳನ್ನ ಸಂಪೂರ್ಣವಾಗಿ ಮುಚ್ಚಲಾಗಿದೆ.

ಮೇ 8, 9 , 10 ರಂದು ಡ್ರೈ ಡೇ ಆಚರಿಸಲು ನೋಟಿಸ್ ನೀಡಿದ್ದಾರೆ. ಜೊತೆಗೆ ಮತ ಎಣಿಕೆಗೂ ಸಮಸ್ಯೆ ಆಗದಂತೆ ಮೇ 13ರ ಬೆಳಗ್ಗೆ 6 ಗಂಟೆಯಿಂದ ಮೇ 14 ರ ಬೆಳಗ್ಗೆ 6 ಗಂಟೆವರೆಗೂ ಮದ್ಯ ಮಾರಾಟ ನಿಷೇದ ಹೇರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇವಿಎಂನಲ್ಲಿ ದೋಷವಿದ್ರೇ ಕೂಡಲೇ ಚೇಂಜ್ ಮಾಡ್ತೇವೆ : ತುಷಾರ್ ಗಿರಿನಾಥ್