Publish Date: Sun, 07 May 2023 (15:57 IST)
Updated Date: Sun, 07 May 2023 (15:58 IST)
ನವದೆಹಲಿ : ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಬಳಿಕ ಹತ್ಯೆಗೈಯುತ್ತಿದ್ದ ಆರೋಪಿ ರವೀಂದರ್ ಕುಮಾರ್ನನ್ನು ದೆಹಲಿಯ ರೋಹಿಣಿ ನ್ಯಾಯಾಲಯವು ಶನಿವಾರ ಅಪರಾಧಿ ಎಂದು ಘೋಷಿಸಿದೆ.
ಅಪರಾಧಿಯು ಉತ್ತರ ಪ್ರದೇಶದ ಕಾಸ್ಗಂಜ್ ಮೂಲದವನಾಗಿದ್ದು ಸುಮಾರು 30 ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತ ದೆಹಲಿ-ಎನ್ಸಿಆರ್ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ಅಪರಾಧಗಳನ್ನು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಪರಾಧಿ ಮದ್ಯ ಮತ್ತು ಮಾದಕವ್ಯಸನಿಯಾಗಿದ್ದು, ಅಮಲೇರಿದ ಸ್ಥಿತಿಯಲ್ಲಿ ಅಪರಾಧಗಳನ್ನು ಮಾಡುತ್ತಿದ್ದ. ಅಲ್ಲದೇ ಮಕ್ಕಳಿಗೆ ಸಿಹಿ ತಿಂಡಿ ಆಮಿಷವೊಡ್ಡಿ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಿದ್ದ ಎಂದು ವರದಿಗಳು ತಿಳಿಸಿವೆ.