ಇಂದಿನಿಂದ ಬೆಂಗಳೂರಿನಲ್ಲಿ ಸಂಚರಿಸಲಿದೆ ಎಲೆಕ್ಟ್ರಿಕ್ ಬಸ್

Webdunia
ಗುರುವಾರ, 30 ಸೆಪ್ಟಂಬರ್ 2021 (11:42 IST)
ಬೆಂಗಳೂರು(ಸೆ.30) :  ಅತಿಯಾಗಿ ವಾಹನಗಳು ಉಗುಳುವ ಹೊಗೆ, ಕಿವಿಗೆ ಕಿರಿಕಿರಿ ಎನ್ನುವಷ್ಟರ ಮಟ್ಟಿಗೆ ಆ ವಾಹನಗಳ ಶಬ್ದ, ಇವೆಲ್ಲವೂ ನೀವು ಬೆಂಗಳೂರಿನಲ್ಲಿದ್ದರೆ ನಿಮಗೆ ಸಾಕಪ್ಪಾ ಸಾಕು ಈ ಕಿರಿಕಿರಿ ಅನ್ನಿಸದೆ ಇರದು.

ಆದರೆ ಬೆಂಗಳೂರಿನ ಜನರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ, ಏನಪ್ಪಾ ಆ ಸುದ್ದಿ ಅಂತೀರಾ. ಇಂದು ಬೆಂಗಳೂರಿನ ಮೊದಲ ಎಲೆಕ್ಟ್ರಿಕ್ ಬಸ್ ಬರಲಿದ್ದು, ಅದನ್ನು ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ನಿಯೋಜಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಎನ್ಟಿಪಿಸಿ ಮತ್ತು ಜೆಬಿಎಂ ಆಟೋ ಕಂಪೆನಿಗಳು ಜಂಟಿಯಾಗಿ 9 ಮೀಟರ್ ಉದ್ದದ 90 ನಾನ್-ಎಸಿ ಎಲೆಕ್ಟ್ರಿಕ್ ಬಸ್ಗಳನ್ನು ಒದಗಿಸುವ ಕೆಲಸವನ್ನು ವಹಿಸಿಕೊಂಡಿವೆ.
ಬಿಎಂಟಿಸಿ ಹಲವು ದಿನಗಳ ಕನಸು ನನಸಾಗುತ್ತಿದೆ. ಇಂದಿನಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳು ರಸ್ತೆಗಿಳಿಯಲಿವೆ. ಇಂದು 10.30ಕ್ಕೆ ಎಲೆಕ್ಟ್ರಿಕ್ ಬಸ್ ಸೇವೆಗೆ ಅಧಿಕೃತ ಚಾಲನೆ ಸಿಗಲಿದೆ. ಸಾರಿಗೆ ಸಚಿವ ಶ್ರೀರಾಮುಲು ಕೆಂಗೇರಿ ಬಸ್ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಬಸ್ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಉದ್ಘಾಟನೆ ಬಳಿಕ ಸಚಿವರು ಎಲೆಕ್ಟ್ರಿಕ್ ಬಸ್ನಲ್ಲಿ  ನಗರ ಪ್ರದಕ್ಷಿಣೆ ಮಾಡಲಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಮೊದಲ ಬಸ್ಗೆ ಇಂದು ಚಾಲನೆ ದೊರೆಯಲಿದೆ. ಮೊದಲ ಹಂತದಲ್ಲಿ 300 ಎಲೆಕ್ಟ್ರಿಕ್ ಬಸ್ಗಳಿಗೆ ಬಿಎಂಟಿಸಿ ಗುತ್ತಿಗೆ ನೀಡಿದೆ.  ಎಲೆಕ್ಟ್ರಿಕ್ ಬಸ್ಗೆ 45 ನಿಮಿಷ ಚಾರ್ಜ್ ಮಾಡಿದರೆ 225 ಕಿ.ಮೀ ಸಂಚಾರ ಮಾಡಲಿದೆ.
ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ 90 ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು 2020ರ ಫೆಬ್ರುವರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲೆಕ್ಟ್ರಿಕ್ ಬಸ್ನಲ್ಲಿ ಸುಮಾರು 30 - 35 ಪ್ರಯಾಣಿಕರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಈ ಎಲೆಕ್ಟ್ರಿಕ್ ಬಸ್ಗಳನ್ನು ಮುಖ್ಯವಾಗಿ ಈ ಮೆಟ್ರೋ ನಿಲ್ದಾಣಗಳಲ್ಲಿ ಬರುವಂತಹ ಪ್ರಯಾಣಿಕರಿಗೆ ಬೇರೆ ಏರಿಯಾಗಳಿಗೆ ಪ್ರಯಾಣಿಸಲು ಅನುಕೂಲವಾಗಲು ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ರಸ್ತೆ, ಬೈಯಪ್ಪನಹಳ್ಳಿ, ಬನಶಂಕರಿ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳಲ್ಲಿ ಈ ಎಲೆಕ್ಟ್ರಿಕ್ ಬಸ್ಗಳನ್ನು ನಿಯೋಜಿಸುವ ಯೋಜನೆ ಹೊಂದಿದ್ದಾರೆ. ಇಂದು ಬರಲಿರುವ ಮೊದಲ ಎಲೆಕ್ಟ್ರಿಕ್ ಬಸ್ ಅನ್ನು ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ನಿಯೋಜಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಮೊದಲ ಎಲೆಕ್ಟ್ರಿಕ್ ಬಸ್ ಉತ್ತರ ಪ್ರದೇಶದ ಮಥುರಾ ಬಳಿಯಿರುವಂತಹ ಕೋಸಿಯಲ್ಲಿರುವ ಜೆಬಿಎಂ ಬಸ್ ಪ್ಲ್ಯಾಂಟ್ನಿಂದ ಬುಧವಾರ ರಾತ್ರಿಯೇ ಅಲ್ಲಿಂದ ಹೊರಟಿದ್ದು, ಬೆಂಗಳೂರು ಬಂದು ತಲುಪಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಋತುಚಕ್ರ ಮುಂದೂಡಲು ಮಾತ್ರೆ ತೆಗೆದುಕೊಳ್ಳಬಹುದೇ, ಡಾ ಪದ್ಮಿನಿ ಪ್ರಸಾದ್ ಹೇಳಿದ್ದೇನು

ಸಂಬಳ ಕೊಡಕ್ಕೆ ದುಡ್ಡಿಲ್ಲ, ಗುಂಡಿ ಮುಚ್ಚಲು ಹಣವಿಲ್ಲ, ಟ್ಯಾಕ್ಸ್ ದುಡ್ಡು ಏನ್ಮಾಡ್ತೀರಿ ಸ್ವಾಮಿ: ಆರ್ ಅಶೋಕ್

ಪ್ರಿಯಾಂಕ್ ಖರ್ಗೆ ಓದಿದ್ದು ಎಸ್ಎಸ್ಎಲ್ ಸಿನಾ, ಪಿಯುಸಿನಾ: ಈ ಕನ್ ಫ್ಯೂಷನ್ ಸರಿ ಮಾಡಿ ಸಾರ್ ನೆಟ್ಟಿಗರಿಂದ ಟ್ರೋಲ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments