Select Your Language

Notifications

webdunia
webdunia
webdunia
webdunia

ಬಿಎಂಟಿಸಿಯಿಂದ ಪ್ರಯಾಣಿಕರ ಅನುಕೂಲಕ್ಕೆ ನೂತನ ಮಾರ್ಗಗಳ ಪರಿಚಯ

Introduction of new routes for the convenience of passengers from BMTC
bangalore , ಬುಧವಾರ, 4 ಆಗಸ್ಟ್ 2021 (21:27 IST)
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧೆಡೆ ಆರು ಹೊಸ ಮಾರ್ಗಗಳನ್ನು ಪರಿಚಯಿಸಿದೆ. ಹೆಚ್ಚು ಬೇಡಿಕೆ ಇರುವ ಆರು ಮಾರ್ಗಗಳಲ್ಲಿ ನಿತ್ಯ 20 ಶೆಡ್ಯುಲ್ ಗಳು 223 ಸುತ್ತುವಳಿಗಳಲ್ಲಿ ಕಾರ್ಯಾಚರಣೆ ಮಾಡಲಿದ್ದು ಪ್ರಯಾಣ ದರ ಸಾರ್ವಜನಿಕರಿಗೆ ಅತ್ಯಂತ ಕೈಗೆಟಕುವಂತೆ ಇರಲಿದೆ ಎಂದು ಬಿಎಂಟಿಸಿ ತಿಳಿಸಿದೆ.
 
ನೂತನ ಮಾರ್ಗಗಳು: 
 
ನಂಬರ್ 515 ಕೆಂಗೇರಿ ಟಿಟಿಎಂಸಿನಿಂದ ಜಾಲಹಳ್ಳಿ ಕ್ರಾಸ್ ವರೆಗೆ ಮಾರ್ಗ: 
 
ಕೊಮ್ಮಘಟ್ಟ ಜಂಕ್ಷನ್, ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್, ಸೊನ್ನೇನಹಳ್ಳಿ ಉಪಕಾರ್ ಲೇಔಟ್ ಕ್ರಾಸ್, ಮುದ್ದಯ್ಯನಪಾಳ್ಯ, ಬಿಇಎಲ್ ಲೇಔಟ್ 1ನೇ ಹಂತ, ಸುಂಕದಕಟ್ಟೆ ಹೆಗ್ಗನಹಳ್ಳಿ ಪೀಣ್ಯ 2ನೇ ಹಂತ, ಎನ್‌ಟಿಟಿಎಫ್.
 
ಎಂಎಫ್-26 ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣದಿಂದ ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣದವರೆಗೆ ಮಾರ್ಗ: 
 
ರಾಜಗೋಪಾಲನಗರ ಪೊಲೀಸ್ ಠಾಣೆ, ಚೌಡೇಶ್ವರಿ ನಗರ, ಬಿಡಿಎ ಬಸ್ ಬೇ/ ಸ್ವತಂತ್ರ ಯೋಧನಗರ, ಕಂಠೀರವ ಸ್ಟುಡಿಯೋ, ರಾಜಗೋಪಾಲನಗರ ಪೊಲೀಸ್ ಠಾಣೆ. ಬಿಯುಸಿ ಗೇಟ್, ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಉಪಕಾರ್ ಲೇಔಟ್ ಕ್ರಾಸ್, ಮುದ್ದಯ್ಯನಪಾಳ್ಯ, ಬಿಇಎಲ್ ಲೇಔಟ್ 1ನೇ ಹಂತ, ಸುಂಕದಕಟ್ಟೆ ಹೆಗ್ಗನಹಳ್ಳಿ ಪೀಣ್ಯ 2ನೇ ಹಂತ ಮತ್ತು ಎನ್ ಟಿಟಿಎಫ್
 
315-ಜಿ: ಕೆ.ಆರ್.ಪುರಂನಿಂದ ದೊಮ್ಮಲೂರು ಟಿಟಿಎಂಸಿವರೆಗೆ ಮಾರ್ಗ: ಟಿನ್‌ಫ್ಯಾಕ್ಟರಿ, ಬೆನ್ನಿಗಾನಹಳ್ಳಿ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ, ಸಿ.ವಿ. ರಾಮನ್ ಆಸ್ಪತ್ರೆ, ಚಿನ್ಮಯ ಮಿಷನ್ ಆಸ್ಪತ್ರೆ, ಇಂದಿರಾನಗರ ಕೆಎಫ್‌ಸಿ, ಇಎಸ್‌ಐ ಆಸ್ಪತ್ರೆ.
 
ಎಂಎಫ್-24: ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣದಿಂದ 345-ಎಫ್: ಸೇಂಟ್ ಜಾನ್ಸ್ ಆಸ್ಪತ್ರೆಯಿಂದ ಬನ್ನೇರುಘಟ್ಟ ಲಗ್ಗೆರೆ ಮಾರ್ಗ: ರಾಜಗೋಪಾಲನಗರ ಪೊಲೀಸ್ ಠಾಣೆ ವೃತ್ತದವರೆಗೆ ಮಾರ್ಗ: ಕೃಪಾನಿಧಿ ಕಾಲೇಜು, ಮಡಿವಾಳ, 410-ಎಚ್: ಶ್ರೀನಗರದಿಂದ ಜಾಲಹಳ್ಳಿ ಕ್ರಾಸ್‌ವರೆಗೆ ಮಾರ್ಗ: ಬೊಮ್ಮನಹಳ್ಳಿ, ಹೊಂಗಸಂದ್ರ, ಬೇಗೂರು, ಸೇಂಟ್ ಮೇರಿಸ್ ಹೊಸಕೆರೆಹಳ್ಳಿ ಕ್ರಾಸ್, ಪಿಇಎಸ್ ಕಾಲೇಜು, ನಾಯಂಡಹಳ್ಳಿ ಸ್ಕೂಲ್, ಹೊಮ್ಮದೇವನಹಳ್ಳಿ ಕಲ್ಕೆರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಿ ಮದುವೆಯಾದ ಪತಿಯನ್ನೇ ಕೊಂದ ಪ್ರೇಮಿ