Select Your Language

Notifications

webdunia
webdunia
webdunia
webdunia

ಪ್ರೀತಿಸಿ ಮದುವೆಯಾದ ಪತಿಯನ್ನೇ ಕೊಂದ ಪ್ರೇಮಿ

ಪ್ರೀತಿಸಿ ಮದುವೆಯಾದ ಪತಿಯನ್ನೇ ಕೊಂದ ಪ್ರೇಮಿ
bangalore , ಬುಧವಾರ, 4 ಆಗಸ್ಟ್ 2021 (21:23 IST)
ಪ್ರೀತಿಸಿ ಮದುವೆಯಾದ ಪತಿಯನ್ನೇ ಪತ್ನಿಯೊಬ್ಬಳು ಮತ್ತೊಬ್ಬ ಪ್ರೇಮಿ ಜತೆ ಸೇರಿ ಕೊಲೆಗೈದಿರುವ ಘಟನೆ ಕೆಂಪೇಗೌಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡ್ಯ ಮೂಲದ ಕಾರ್ತಿಕ್ (25) ಕೊಲೆಯಾದ ವ್ಯಕ್ತಿ. ಮೃತನ ಪತ್ನಿ ರಂಜಿತಾ (24), ಆಕೆಯ ಪ್ರಿಯಕರ ಮಂಡ್ಯ ಮೂಲದ ಕೋಡಿ ಗ್ರಾಮದ ಎಂ.ಎಸ್. ಸಂಜೀವ್ (28)  ಹಾಗೂ ಹಾಸನ ಮೂಲದ ಆರ್. ಆರ್. ಸುಬ್ರಮಣ್ಯ (20) ಬಂಧಿತರು. 
ಮಂಡ್ಯದ ಮೂಲದ ಕೀಲಾರ ಮೂಲದ ಕಾರ್ತಿಕ ಹಾಗೂ ರಂಜಿತಾ ಇಬ್ಬರು ಐದು ವರ್ಷಗಳಿಂದ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದರು. ದಂಪತಿ ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಬಂದು, ಕಾರ್ತಿಕ್ ತನ್ನ ಸ್ನೇಹಿತ ಚಾಮರಾಜಪೇಟೆಯ ಬಂಡಿ ಮಹಾಕಾಳಮ್ಮ ದೇವಾಲಯ ಹಿಂಭಾಗ ವಾಸವಿರುವ ಸಂಜೀವ್ ಮನೆಯಲ್ಲಿ ನೆಲೆಸಿದ್ದರು. ಈ ಇಬ್ಬರು ಸ್ನೇಹಿತರು ವೃತ್ತಿಯಲ್ಲಿ ಆಟೋಚಾಲಕರಾಗಿದ್ದು ಜೀವನ ನಡೆಸುತ್ತಿದ್ದರು. ದಿನ ಕಳೆದಂತೆ ಕಾರ್ತಿಕ್ ಪತ್ನಿಯ ಮೋಹಕ್ಕೆ ದಾಸನಾದ ಸಂಜೀವ್ ಆಕೆಯ ಜತೆ ಅಕ್ರಮ ಸಂಬಂಧ ಬೆಳೆಸೆಬಿಟ್ಟಿದ್ದ. ಗಂಡನಿದ್ದರೂ ಪರ ಪುರುಷನ ಕಾಮದಾಟಕ್ಕೆ ಮನಸೋತ ರಂಜಿತಾ ತನ್ನ ಅಕ್ರಮ ಸಂಬಂಧ ಸಲಿಸಾಗಲೆಂದು ತನ್ನ ಪತಿಯನ್ನೇ ಮುಗಿಸಲು ಸಂಚು ರೂಪಿಸಿದ್ದಳು. 
ಸಂಜೀವ್ ಮತ್ತು ರಂಜಿತ ರೂಪಿಸಿದ ಸಂಚಿನಂತೆ ಜುಲೈ29 ರಂದು ಕಾರ್ತಿಕ್ ಗೆ ಮದ್ಯ ಕುಡಿಸಿ ಮತ್ತೊಬ್ಬ ಸ್ನೇಹಿತ ಸುಬ್ರಮಣ್ಯ ಜತೆ ಆಟೋದಲ್ಲಿ ಚನ್ನಪಟ್ಟಣಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಕಾರ್ತಿಕ್ ಮೇಲೆ ಸಂಜೀವ್ ಹಾಗೂ ಸುಬ್ರಮಣ್ಯ ಚಾಕು, ರಾಡ್ ನಿಂದ ಹಲ್ಲೆ ನಡೆಸಿ ತಲೆಮೇಲೆ ಕಲ್ಲುಹಾಕಿ ಕೊಲೆಗೈದಿದ್ದರು. ಬಳಿಕ ಶವವನ್ನು ಚೀಲದಲ್ಲಿ ತುಂಬಿಕೊಂಡು ಬಂದು ಮೈಸೂರು ರಸ್ತೆಯ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ಬಳಿ ನಿರ್ಜನ ಪ್ರದೇಶದಲ್ಲಿ ಪೊದೆಯೊಳಗೆ ಇಟ್ಟು ಹೋಗಿದ್ದರು. 
ಮೃತನ ಸಹೋದರಿ ಕೀರ್ತನಾ ನೀಡಿದ ದೂರಿನನ್ವಯ ಪೊಲೀಸರು ತನಿಖೆ ನಡೆಸಿದ್ದಾರೆ. ಬಳಿಕ ಮೃತನ ಪತ್ನಿ ರಂಜಿತಾ ಹಾಗೂ ಸಂಜೀವ್ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ತಿಳಿದಿಬಂದಿದೆ.‌ಸದ್ಯ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಅನುಮಾನಬರಬಾರದೆಂದು ಪತ್ನಿಯಿಂದ ದೂರು: 
ರಂಜೀತ ಪ್ರಿಯಕರ ಸಂಜೀವ್ ಜುಲೈ 29 ರಂದು ಕಾರ್ತಿಕ್ ನನ್ನು ಕರೆದುಕೊಂಡು ಹೋಗಿದ್ದ. ಬಳಿಕ ಕೊಲೆ ಮಾಡಿರುವ ಬಗ್ಗೆ ಯಾರಿಗೂ ಅನುಮಾನ ಬರಬಾರದೆಂದು ಆಗಸ್ಟ್ 1 ರಂದು ರಂಜಿತಾ, ತನ್ನ ಪತಿ ಕಾರ್ತಿಕ್ ಕಾಣೆಯಾಗಿರುವ ಬಗ್ಗೆ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ವೇಳೆ ಅನುಮಾನಗೊಂಡ ಪೊಲೀಸರು ರಂಜಿತಾ ಹಾಗೂ ಸಂಜೀವ್ ವಿಚಾರಣೆ ನಡೆಸಿದಾಗ ಕೊಲೆಯಾಗಿರುವ ನಿಜಾಂಶ ಹೊರಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಬಿಜೆಪಿಗೆ ಬಿಎಸ್ ಪಿ ಶಾಸಕ ಎನ್.ಮಹೇಶ್ ಸೇರ್ಪಡೆ