Select Your Language

Notifications

webdunia
webdunia
webdunia
webdunia

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ` BMTC' ಯಿಂದ ಗುಡ್ ನ್ಯೂಸ್

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ` BMTC' ಯಿಂದ ಗುಡ್ ನ್ಯೂಸ್
ಬೆಂಗಳೂರು , ಮಂಗಳವಾರ, 28 ಸೆಪ್ಟಂಬರ್ 2021 (10:47 IST)
ಬೆಂಗಳೂರು : ಈಗಾಗಲೇ ಶಾಲಾ-ಕಾಲೇಜು ಆರಂಭದ ನಂತ್ರ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಬಿಎಂಟಿಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಸ್ತರಣೆ ಮಾಡಿತ್ತು. ಇದೀಗ ಮತ್ತೆ ಶಾಲಾ - ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಾಸ್ ಅವಧಿಯನ್ನು ವಿಸ್ತರಣೆ ಮಾಡಿದೆ.

ಈ ಕುರಿತಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯು ಆಗಸ್ಟ್ ಮತ್ತು ಸೆಪ್ಟೆಂಬರ್ 2021ರ ಮಾಹೆಯಲ್ಲಿ ಶಾಲಾ -ಕಾಲೇಜುಗಳನ್ನು ಪ್ರಾರಂಭ ಮಾಡಿರುತ್ತದೆ. ಆದ್ದರಿಂದ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಲು ಈ ಕೆಳಕಂಡಂತೆ ಅವಕಾಶ ಕಲ್ಪಿಸಿರುತ್ತದೆ.
•6 ರಿಂದ 10ನೇ ತರಗತಿ, ಪಿಯುಸಿ ( 11 + 12 ) ವಿದ್ಯಾರ್ಥಿಗಳಿಗೆ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು 2020-21ನೇ ಸಾಲಿನ ವಿದ್ಯಾರ್ಥಿ ಪಾಸು ಅಥವಾ 2021-22ನೇ ಸಾಲಿನ ಶುಲ್ಕ ರಸೀದಿ ಅಥವಾ ಗುರುತಿನ ಚೀಟಿಯೊಂದಿಗೆ ಮುಂದಿನ ಆದೇಶದವರೆಗೂ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
•ಐಟಿಐ, ಡಿಪ್ಲೋಮಾ, ವೃತ್ತಿಪರ, ಪದವಿ ( ಪ್ರಥಮ ವರ್ಷ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಸ್ನಾತಕೋತ್ತರ, ಪಿ.ಹೆಚ್.ಡಿ, ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜು, ಸಂಜೆ ಕಾಲೇಜು ವಿದ್ಯಾರ್ಥಿಗಳು 2020-21ನೇ ಸಾಲಿನ ವಿದ್ಯಾರ್ಥಿ ಪಾಸಿನ ಮಾನ್ಯತಾ ಅವಧಿಯನ್ನು ದಿನಾಂಕ 31-10-2021ರವರೆಗೆ ವಿಸ್ತರಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯಪ್ರಿಯರಿಗೆ ಶಾಕ್!