Select Your Language

Notifications

webdunia
webdunia
webdunia
webdunia

ಭಾರತ ಜನರಿಗೆ ಕಾದಿದೆ ಪ್ರವಾಹದ ಅಪಾಯ!

Ramys news update. Can i ask u daily.once finished updation pls send msg

ಭಾರತ ಜನರಿಗೆ ಕಾದಿದೆ ಪ್ರವಾಹದ ಅಪಾಯ!
ನವದೆಹಲಿ , ಮಂಗಳವಾರ, 28 ಫೆಬ್ರವರಿ 2023 (12:51 IST)
ಜಾಗತಿಕ ತಾಪಮಾನ ಈ ಜಗತ್ತಿಗೆ ಅಂಟಿರೋ ಬಹುದೊಡ್ಡ ಪಿಡುಗು. ವಿಶ್ವಕ್ಕೆ ಕಂಟಕ ಪ್ರಾಯವಾಗಿರುವ ಇದನ್ನು ನಿರ್ವಹಿಸಲು ಎಲ್ಲಾ ರಾಷ್ಟ್ರಗಳು ಕೈಜೋಡಿಸಿವೆ.

ಜಾಗತಿಕ ತಾಪಮಾನ ನಿರ್ವಹಿಸುವ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಸಭೆ-ಸಮಾರಂಭಗಳು ನಡೆಯುತ್ತಲೇ ಇವೆ. ವಿಶ್ವ ನಾಯಕರು ಪಾಲ್ಗೊಂಡು ಗಂಭೀರ ಚರ್ಚೆಗಳನ್ನು ನಡೆಸುತ್ತಲೇ ಇದ್ದಾರೆ.

ಈ ಗಂಡಾಂತರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಹೀಗಿರುವಾಗಲೇ ಪ್ರಾಕೃತಿಕ ವಿಕೋಪಗಳು ಒಂದಲ್ಲಾ ಒಂದು ರೀತಿ ಅನೇಕ ರಾಷ್ಟ್ರಗಳನ್ನು ಕಾಡುತ್ತಲೇ ಇವೆ.

ಜಾಗತಿಕ ತಾಪಮಾನ ಪರಿಣಾಮ ಕುರಿತು ಹೊಸ ಅಧ್ಯಯನವೊಂದು ಬಹಿರಂಗಪಡಿಸಿರುವ ವರದಿಯು ಭಾರತ, ಪಾಕಿಸ್ತಾನ ರಾಷ್ಟ್ರಗಳಿಗೆ ಭೀತಿ ಹುಟ್ಟಿಸಿದೆ. ಈ ಅಧ್ಯಯನದ ಪ್ರಕಾರ, ಹಿಮಗಳು ಕರಗುತ್ತಿರುವುದರಿಂದ ಭಾರತ, ಪಾಕಿಸ್ತಾನ ಸೇರಿದಂತೆ 4 ರಾಷ್ಟ್ರಗಳಲ್ಲಿ 15 ಮಿಲಿಯನ್ಗೂ (1.5 ಕೋಟಿ) ಅಧಿಕ ಜನರು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆ : ಕುಮಾರಸ್ವಾಮಿ