Select Your Language

Notifications

webdunia
webdunia
webdunia
webdunia

ಸಮ್ಮಿಶ್ರ ಸರ್ಕಾರದ ಆಯಸ್ಸು ಕೇವಲ ಮೂರು ತಿಂಗಳು ಮಾತ್ರ: ಡಿವಿಎಸ್

ಸಮ್ಮಿಶ್ರ ಸರ್ಕಾರದ ಆಯಸ್ಸು ಕೇವಲ ಮೂರು ತಿಂಗಳು ಮಾತ್ರ: ಡಿವಿಎಸ್
ಮಂಡ್ಯ , ಸೋಮವಾರ, 21 ಮೇ 2018 (16:24 IST)
ಸಮ್ಮಿಶ್ರ ಸರ್ಕಾರದ ಆಯಸ್ಸು ಕೇವಲ ಮೂರು ತಿಂಗಳು ಮಾತ್ರ ಎಂದು ಮಂಡ್ಯದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದ್ದಾರೆ.
ಮಂತ್ರಿ ಮಂಡಲ ರಚಿಸುವ ಸಂದರ್ಭದಲ್ಲಿ ಇವರ ಕಿತ್ತಾಟ ಆರಂಭವಾಗುತ್ತದೆ. ಬಹುಮತ ಸಾಬೀತು ಮಾಡುವ ಸಂದರ್ಭದಲ್ಲೇ ಸರ್ಕಾರ ಬಿದ್ದರೂ ಆಶ್ಚರ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಇರಬಾರದೆಂದು ಜನ ಬಿಜೆಪಿ ಗೆ ಆಶೀರ್ವಾದ ಮಾಡಿದ್ದರು. ಆದರೆ ಜೆಡಿಎಸ್, ಕಾಂಗ್ರೆಸ್ ಜನಾದೇಶವನ್ನು ಧಿಕ್ಕರಿಸಿವೆ ಎಂದು ಆರೋಪಿಸಿದರು.
 
ಮತ್ತೆ ಅವಕಾಶ ಬಂದರೆ ಸರ್ಕಾರ ರಚಿಸಲು ಬಿಜೆಪಿ ಪ್ರಯತ್ನ
 
ಶಾಸಕರನ್ನು ಸೆಳೆಯಲು ಬಿಜೆಪಿ ಹಣದ ಆಮಿಷವೊಡ್ಡಿದ್ದಾರೆಂಬ ಆರೋಪ ಅಲ್ಲಗಳೆದ ಅವರು, ಆಡಿಯೋ, ವೀಡಿಯೋಗಳ ಬಗ್ಗೆ ತನಿಖೆ ನಡೆಯಲಿ. ಇವೆಲ್ಲ ಫೇಕ್. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ. ಕೇಂದ್ರ ಸರ್ಕಾರ ರಾಜಭವನ ದುರುಪಯೋಗ ಪಡಿಸಿಕೊಂಡಿಲ್ಲ. ನಾವು ಅತಿದೊಡ್ಡ ಪಕ್ಷವೆಂದು ರಾಜ್ಯಪಾಲರು ಆಹ್ವಾನ ಮಾಡಿದ್ದರು ಎಂದು ತಿಳಿಸಿದ್ದಾರೆ.
 
ಕಾಂಗ್ರೆಸ್, ಜೆಡಿಎಸ್ ವಾಚಾಮಗೋಚರವಾಗಿ ಕಚ್ಚಾಡಿದ್ದರು. ಸಿದ್ದು, ಎಚ್ಡಿಕೆ ಹಾವು ಮುಂಗಿಸಿಯಂತಿದ್ದವರು ಅಧಿಕಾರಕ್ಕೆ ಒಂದಾದ್ರುಕಾಂಗ್ರೆಸ್ ಜೊತೆ ಜೆಡಿಎಸ್ ಹೋಗಲ್ಲ ಅನ್ಕೊಂಡಿದ್ದೆವು. ಪ್ರಜಾಪ್ರಭುತ್ವ ಧಿಕ್ಕರಿಸಿ ಕಾಂಗ್ರೆಸ್ ಜೊತೆ ಅಧಿಕಾರಕ್ಕಾಗಿ ಹೊಂದಾದ್ರು. ನಮಗೆ ಜೆಡಿಎಸ್- ಕಾಂಗ್ರೆಸ್ ಕೊಳಕು ರಾಜಕೀಯ ಗೊತ್ತಾದ ಮೇಲೆ ನಾವು ಬಹುಮತ ಸಾಬೀತು ಮಾಡ್ಲಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟಾಂಗ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಅನುಗ್ರಹದಿಂದ ಜನತೆಯ ಸೇವೆ ಮಾಡೋ ಅವಕಾಶ: ಕುಮಾರಸ್ವಾಮಿ