Publish Date: Mon, 21 May 2018 (15:59 IST)
Updated Date: Mon, 21 May 2018 (16:00 IST)
ದೇವರ ಅನುಗ್ರಹದಿಂದ ಜನತೆಯ ಸೇವೆ ಮಾಡೋ ಅವಕಾಶ ದೊರೆತಿದೆ ಎಂದು ನಿಯೋಜಿತ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಾನು ಹುಟ್ಟಿ ಬೆಳೆದ ಲಕ್ಷ್ಮಿ ನರಸಿಂಹ ಸ್ವಾಮಿ, ಹರದನಹಳ್ಳಿ ಶಿವನ ಆಶೀರ್ವಾದ ಪಡೆಯಲು ಬಂದಿದ್ದೇನೆ. ದೇವರ ಅನುಗ್ರಹ, ಹೆತ್ತವರ ಆಶೀರ್ವಾದ ದಿಂದ ನಾಡಿನ ಜನರ ಸೇವೆ ಮಾಡೋ ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಧ್ಯಾಹ್ನ ದೆಹಲಿಗೆ ಹೋಗಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಾಯಾವತಿ ಭೇಟಿ ಮಾಡುವೆ. ನನಗೆ ಬೆಂಬಲ ನೀಡಿರುವ ಇತರ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ಮಾಡುವೆ. ಐದು ವರ್ಷ ಸುಭದ್ರ ಆಡಳಿತ ನೀಡಲು ಸಂಕಲ್ಪ ಮಾಡಿದ್ದೇನೆ ಎಂದರು.
ಈ ಬಾರಿ ಸಿಎಂ ಹುದ್ದೆ ನಿಭಾಯಿಸುವುದು ದೊಡ್ಡ ಸವಾಲು ಎಂಬುದು ನನಗೆ ಗೊತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ. ಎಲ್ಲರ ಅಭಿಪ್ರಾಯಗಳನ್ನು ನಾನು ಗಮನಿಸುತ್ತಿದ್ಸೇನೆ. ಯಾರೂ ನನ್ನನ್ನು ನಿದ್ರೆಗೆಡಿಸಲು ಆಗಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಶ್ರೀರಾಮುಲುಗೆ ತಿರುಗೇಟು ನೀಡಿದ್ದಾರೆ.