Publish Date: Mon, 21 May 2018 (15:49 IST)
Updated Date: Mon, 21 May 2018 (15:51 IST)
ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿ ಸರ್ಕಾರ 5 ವರ್ಷ ಸುಗಮವಾಗಿ ನಡೆಯಲಿದೆ ಎಂದು ಸಂಸದ ಆರ್. ಧೃವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ನಿರ್ದೇಶನದಂತೆ ನೂತನ ಸಮಿಶ್ರ ರಚನೆಯಾಗುತ್ತಿದೆ. ಬೇಷರತ್ ಬೆಂಬಲದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಮೈಸೂರು ಭಾಗದಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿರೋದನ್ನ ನಾನು ಒಪ್ಪುತ್ತೇನೆ ಎಂದರು.
ನಂಜನಗೂಡು, ತಿ. ನರಸೀಪುರ ,ಗುಂಡ್ಲುಪೇಟೆ, ಚಾಮುಂಡೇಶ್ಚರಿಯಲ್ಲಿ ನಾವು ಸೋಲು ಕಂಡಿದ್ದೇವೆ. ನಾವು ಸೋತಿರೋ ಕ್ಚೇತ್ರಗಳ ಬಗ್ಗೆ ಆತ್ಮಾವಲೋಕನ ಸಭೆ ನಡೆಸಿ ಈಗಾಗಿರೋ ತಪ್ಪು ಸರಿಪಡಿಸಿಕೊಳ್ಳುತ್ತೇವೆ.
ನಮ್ಮವು ಎರಡು ಜ್ಯಾತ್ಯಾತೀತ ಪಕ್ಷಗಳು. ಸಮಾನ ಮನಸ್ಕರು ಇರೋದ್ರಿಂದ ಐದು ವರ್ಷ ಆಡಳಿತ ನಡೆಸುತ್ತೇವೆ ಎಂದು ಸಂಸದ ಧೃವನಾರಾಯಣ್ ತಿಳಿಸಿದ್ದಾರೆ.