Select Your Language

Notifications

webdunia
webdunia
webdunia
webdunia

ಇಂದು 14ನೇ ಬಜೆಟ್ ಮಂಡಿಸಲಿರುವ ಸಿಎಂ

ಇಂದು 14ನೇ ಬಜೆಟ್ ಮಂಡಿಸಲಿರುವ ಸಿಎಂ
ಬೆಂಗಳೂರು , ಶುಕ್ರವಾರ, 7 ಜುಲೈ 2023 (07:05 IST)
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 14ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಜೆಟ್ನಲ್ಲಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ನಡುವೆ ನಿರೀಕ್ಷೆಗಳು ಹೆಚ್ಚಿವೆ.
 
ಸರ್ಕಾರ ಬಂದರೆ ಭರವಸೆ ಈಡೇರಿಸುತ್ತೇವೆ ಎಂದಿದ್ದ 5 ಪ್ರಮುಖ ಭರವಸೆಗಳಿಗೆ ಬಜೆಟ್ ನಲ್ಲಿ ಮಾನ್ಯತೆ ಸಿಗುತ್ತಾ?. ಐದು ಗ್ಯಾರಂಟಿ ಅನುಷ್ಠಾನದ ಹೊರೆ ಜೊತೆ ಆರ್ಥಿಕ ವ್ಯವಸ್ಥೆ ಸರಿದೂಗಿಸಿಕೊಂಡು ಕೊಟ್ಟಿದ್ದ 5 ಭರವಸೆಯನ್ನು ಸಿಎಂ ಈಡೇರಿಸ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಗ್ಯಾರಂಟಿ ಅನುಷ್ಠಾನದ ಜೊತೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಕೆಲವೊಂದು ಅಂಶಗಳನ್ನು ಅನುಷ್ಠಾನ ಮಾಡುವ ಸವಾಲು ಕೂಡ ಇದೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಅಂಶಗಳ ಅನುಷ್ಠಾನಕ್ಕೆ ಸಂಬಂಧಿಸಿ ಬಜೆಟ್ ನಲ್ಲಿ ಮಹತ್ವದ ಘೋಷಣೆಗಳ ನಿರೀಕ್ಷೆ ಇದೆ.

ಅಂಗನವಾಡಿ ಕಾರ್ಯಕರ್ತರ ಗೌರವಧನ 11,500 ರಿಂದ 15 ಸಾವಿರಕ್ಕೆ ಹೆಚ್ಚಳ ಘೋಷಣೆ ಮಡುವ ನಿರೀಕ್ಷೆ ಇದೆ. ಅಂಗನವಾಡಿ ಸಹಾಯಕರ ಗೌರವಧನ 7.500 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆಶಾ ಕಾರ್ಯಕರ್ತೆಯರ ಗೌರವಧನ 5 ಸಾವಿರ ದಿಂದ 8 ಸಾವಿರಕ್ಕೆ ಹೆಚ್ಚಳ, ಬಿಸಿ ಊಟ ಕಾರ್ಯಕರ್ತೆಯರ ಗೌರವಧನ 3,700 ರಿಂದ 5 ಸಾವಿರಕ್ಕೆ ಹೆಚ್ಚಳ, ಗುತ್ತಿಗೆ ಆಧಾರಿತ ಪೌರ ಕಾರ್ಮಿಕರ ಖಾಯಂ ಘೋಷಣೆ ನಿರೀಕ್ಷೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಮಾಡಿಸಲಿರುವ ಬಜೆಟ್ ನಿರೀಕ್ಷೆಯಲ್ಲಿರುವ ಬಿಬಿಎಂಪಿ