Select Your Language

Notifications

webdunia
webdunia
webdunia
webdunia

ಮರ್ಯಾದೆ ಇದ್ರೆ ಗ್ಯಾರಂಟಿ ಜಾರಿ ಮಾಡ್ಬೇಕಿತ್ತು

If there was decency
bangalore , ಬುಧವಾರ, 5 ಜುಲೈ 2023 (18:42 IST)
ಕಾಂಗ್ರೆಸ್​​ನವರು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ. ಬಿಜೆಪಿ ಕಚೇರಿ‌ ಮುಂದೆ ಧರಣಿ ಮಾಡ್ತಾರಂತೆ, ಮಾನ ಮರ್ಯಾದೆ ಇದ್ರೆ ಐದು ಗ್ಯಾರಂಟಿ ಜಾರಿ ಮಾಡಬೇಕಿತ್ತು ಎಂದು ಶಾಸಕ ಆರ್. ಅಶೋಕ್​ ಸರ್ಕಾರದ ವಿರುದ್ಧ ಕಿಡಿಕಾರಿದ್ರು.. ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲದಕ್ಕೂ ಮೋದಿ‌ ಮೋದಿ ಅಂತಾರೆ. ಘೋಷಣೆ ಮಾಡುವಾಗ ನಾವು 10 ಕೆ.ಜಿ‌. ಕೊಡ್ತೀವಿ ಎಂದಿದ್ರು. ಆಗ ಜ್ಞಾನ ಇರಬೇಕಿತ್ತು ಎಂದು ತಿರುಗೇಟು ನೀಡಿದ್ರು.ಗ್ಯಾರಂಟಿ ಕಾರ್ಡ್​​​ನಲ್ಲಿ‌ ಕೇಂದ್ರ ಸರ್ಕಾರ ಕೊಡುತ್ತೆ ಅಂತಾ ಹಾಕಿದ್ರಾ? ಇದು ಆಡಂಬರದ ಸರ್ಕಾರ ಎಂದು ವ್ಯಂಗ್ಯವಾಡಿದ್ರು. ವಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲಾ ಹೋಗಿ ಮಾತಾಡಿದ್ದೇವೆ. ನಮ್ಮ ಭಾವ‌ನೆಗಳನ್ನ ಹೇಳಿದ್ದೀವಿ. ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ವರದಿ ಕೊಟ್ಟಿದ್ದಾರೆ.. ಸಂಜೆ ಒಳಗೆ ವಿಪಕ್ಷ ನಾಯಕ ಆಯ್ಕೆ ಆಗ್ತಾರೆ. ನಾನು ವಿಪಕ್ಷ ನಾಯಕ ಸ್ಥಾನ ಕೇಳಿಲ್ಲ. ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ ನೋಡೋಣ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಹತಾಶರಾಗಿ HDK ಸುಳ್ಳು ಹೇಳುತ್ತಿದ್ದಾರೆ