Webdunia - Bharat's app for daily news and videos

Install App

ಹತ್ತನೇ ತರಗತಿ ಶಾಲೆ ಆರಂಭ?

Webdunia
ಶುಕ್ರವಾರ, 11 ಫೆಬ್ರವರಿ 2022 (06:31 IST)
ಬೆಂಗಳೂರು : ರಾಜ್ಯದಲ್ಲಿ ಹಿಜಬ್ ಸಂಘರ್ಷದ ನಡುವೆ ಹೈಕೋರ್ಟ್ನಿಂದ ಶಾಲೆಗಳನ್ನು ಆರಂಭಿಸಲು ಆದೇಶ ಬಂದ ಹಿನ್ನೆಲೆ ಸೋಮವಾರದಿಂದ  ಹತ್ತನೇ ತರಗತಿ ವರೆಗೆ ಎಲ್ಲಾ ಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ.

ಶಕ್ತಿ ಭವನದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಶಾಲೆಗಳ ಡ್ರೆಸ್ ಕೋಡ್ ವಿವಾದ ಶುರುವಾಗಿತ್ತು. ಬಳಿಕ ಹೈಕೋರ್ಟ್ ಮೆಟ್ಟಿಲೇರಿತ್ತು.

ಇದೀಗ ನ್ಯಾಯಾಲಯ ನೀಡಿರುವ ಸೂಚನೆಯನ್ನು ಸರ್ಕಾರ ಗೌರವಿಸುತ್ತದೆ. ಮೊದಲ ಹಂತವಾಗಿ 10ನೇ ತರಗತಿ ವರೆಗೆ ಶಾಲೆಗಳನ್ನು ಸೋಮವಾರದಿಂದ ಆರಂಭಿಸುತ್ತಿದ್ದೇವೆ ಎಂದರು.

ಶಾಲಾ ಮಕ್ಕಳು ಸಂಯಮದಿಂದ ವರ್ತಿಸುತ್ತಿದ್ದಾರೆ ಅವರಿಗೆ ಪ್ರೀತಿಯ ಅಭಿನಂದನೆ ಸಲ್ಲಿಸುತ್ತೇನೆ. ಮೊದಲ ಹಂತದಲ್ಲಿ ಹತ್ತನೇ ತರಗತಿವರೆಗೆ ಆರಂಭದ ಬಳಿಕ ಎರಡನೇ ಹಂತದಲ್ಲಿ ಪಿಯುಸಿ ಮತ್ತು ಡಿಗ್ರಿ ಕಾಲೇಜ್ಗಳನ್ನು ಆರಂಭಿಸುತ್ತೇವೆ.

ನಾಳೆ ಸಂಜೆ ಸಚಿವರ ಜೊತೆ ಸೇರಿ ವೀಡಿಯೋ ಕಾನ್ಫರೆನ್ಸ್ ಮಾಡುತ್ತೇನೆ ನಂತರ ಕಾಲೇಜುಗಳ ಆರಂಭದ ಬಗ್ಗೆ ಪ್ರಕಟಣೆ ಹೊರಡಿಸುತ್ತೇವೆ ಎಂದು ತಿಳಿಸಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments