Select Your Language

Notifications

webdunia
webdunia
webdunia
webdunia

ಕಾರಿನ ಎಲ್ಲಾ ಸೀಟುಗಳಲ್ಲಿ ಸೀಟ್ ಬೆಲ್ಟ್ ಕಡ್ಡಾಯ: ಕೇಂದ್ರ ಸರ್ಕಾರ

ಕಾರಿನ ಎಲ್ಲಾ ಸೀಟುಗಳಲ್ಲಿ ಸೀಟ್ ಬೆಲ್ಟ್ ಕಡ್ಡಾಯ: ಕೇಂದ್ರ ಸರ್ಕಾರ
bangalore , ಬುಧವಾರ, 9 ಫೆಬ್ರವರಿ 2022 (20:48 IST)
ಇನ್ನು ಮುಂದೆ ಎಲ್ಲ ಕಾರಿನ ಸೀಟ್ ಬೆಲ್ಟ್ ಕಡ್ಡಾಯ, ಮಾತ್ರವಲ್ಲ ಪ್ರಸ್ತುತ ಮುಂಭಾಗ ಹಾಗೂ ಹಿಂಭಾಗದ ವಿಂಡೋ ಸೀಟ್‌ಗಳು ಮಾತ್ರ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಗಳನ್ನು ಹೊಂದಿರಬೇಕು. ಈ ರೀತಿಯನ್ನು ವೈ ಆಕಾರದ ಬೆಲ್ಟ್ ಎಂದು ಕರೆಯಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಕಾರಿನ ಎಲ್ಲಾ ಸೀಟುಗಳಲ್ಲಿ ತ್ರಿ ಪಾಯಿಂಟ್ ಸೀಟ್‌ಬೆಲ್ಟ್ ಗಳನ್ನು ಒದಗಿಸುವ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ. ಈ ನಿಯಮವನ್ನು ಇನ್ನು ಒಂದು ತಿಂಗಳಿನೊಳಗೆ ಕೇಂದ್ರ ಮತ್ತು ಸಾರಿಗೆ ಸಚಿವಾಲಯವು ಜಾರಿಗೆ ತರುವಂತೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಭಾರತದಲ್ಲಿ ತಯಾರಾಗುವ ಕಾರುಗಳ ಒಟ್ಟಾರೆ ಸುರಕ್ಷತೆಯ ಗುಣಮಟ್ಟವನ್ನು ಸುಧಾರಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಕೆಲವೊಂದು ಕಾರುಗಳನ್ನು ಹೊರತುಪಡಿಸಿ ದೇಶದಲ್ಲಿ ಹಿಂಭಾಗದಲ್ಲಿ ಮಧ್ಯದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಇರುವುದಿಲ್ಲ ಎಂದು ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್-ಕೇಸರಿ ವಿವಾದ: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ