ಹುಲಿಗಳ ಸಾವಿನ ಸಂಖ್ಯೆ ಗಣನೀಯ ಏರಿಕೆ!

Webdunia
ಶುಕ್ರವಾರ, 11 ಫೆಬ್ರವರಿ 2022 (06:24 IST)
ನವದೆಹಲಿ : ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಗಣನೀಯ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದಲ್ಲಿ ಕಳೆದ ವರ್ಷ 125 ಹುಲಿಗಳು ಸಾವನ್ನಪ್ಪಿವೆ. ಅದೇ ರೀತಿ 2020ರಲ್ಲಿ 106 ಹುಲಿಗಳು ಸಾವನ್ನಪ್ಪಿದ್ದವು ಎಂದು ಸರ್ಕಾರ ಗುರುವಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ 2019ರಲ್ಲಿ 106 ಹುಲಿಗಳು ಸಾವನ್ನಪ್ಪಿದ್ದರೆ, 2021ರಲ್ಲಿ ಹುಲಿಗಳ ಸಾವಿನ ಸಂಖ್ಯೆ 127ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. 

ಕಳೆದ ವರ್ಷ ದೇಶದಲ್ಲಿ ಅತೀ ಹೆಚ್ಚು ಹುಲಿಗಳ ಸಾವು ಮಧ್ಯಪ್ರದೇಶದಲ್ಲಿ ವರದಿಯಾಗಿದೆ. 42 ಮಧ್ಯಪ್ರದೇಶ, 27 ಮಹಾರಾಷ್ಟ್ರ, 15 ಕರ್ನಾಟಕ, 9 ಹುಲಿಗಳು ಉತ್ತರ ಪ್ರದೇಶದಲ್ಲಿ ಸಾವನ್ನಪ್ಪಿವೆ ಎಂದು ತಿಳಿಸಿದರು.

ಪ್ರಾಣಿ-ಮಾನವ ಸಂಘರ್ಷಗಳನ್ನು ನಿರ್ವಹಿಸಲು ಸರ್ಕಾರ ಪ್ರಯತ್ನ ಪಡುತ್ತಿದೆ. ಹುಲಿಗಳ ಬೇಟೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. 

 
ದೇಶದಲ್ಲಿ ಹುಲಿಗಳ ಸಾವು ಹೆಚ್ಚಾಗಿದ್ದರೂ ಅವುಗಳ ಸಂಖ್ಯೆ ದ್ವಿಗುಣಗೊಂಡಿದೆ. 2014ರಲ್ಲಿ 2,226 ಹುಲಿಗಳು ಇದ್ದು, ಇತ್ತೀಚೆಗೆ ಎಂದರೆ 2018ರಲ್ಲಿ ಹುಲಿಗಳ ಸಂಖ್ಯೆ 2,967 ರಷ್ಟು ಇವೆ. ವಿಶ್ವದಲ್ಲೇ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶ ಭಾರತವೇ ಆಗಿದೆ. ಜಾಗತಿಕ ಹುಲಿ ಗಣತಿ ಪ್ರಕಾರ ಶೇ.75 ಕ್ಕಿಂತಲೂ ಹೆಚ್ಚು ಪಾಲು ಭಾರತದಲ್ಲಿಯೇ ಇದೆ ಎಂದು ಯಾದವ್ ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೀಟ್ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಸಿದರೆ ಒಳ್ಳೆಯದಾ, ತೊಂದರೆಯಾ, ಇಲ್ಲಿದೆ ವಿಶ್ಲೇಷಣೆ

ಯೋಧರ ನೋಡಿ ಹೆದರಿದ ಬಾಲಕಿಗೆ ತಂದೆ ಮಾಡಿದ್ದೇನು: ವಿಡಿಯೋ ಕೊನೆಯವರೆಗೂ ನೋಡಿ Video

ಮೋದಿ ಜೀಯವರ ಮಿತವ್ಯಯದ ಕರೆಗೆ ಎಲ್ಲರೂ ಸಹಕರಿಸೋಣ: ವಿಜಯೇಂದ್ರ

ಆಕ್ಸಿಡೆಂಟ್ ಆಗಿ ಐಸಿಯುವಿನಲ್ಲಿದ್ದರೂ ವಧುವಿನ ಕೈ ಬಿಡದ ವರ ಮಾಡಿದ್ದೇನು Video

ಸ್ವಲ್ಪವೂ ಸೆನ್ಸ್ ಇಲ್ಲ...ಹೊಸ ಕಾಂಕ್ರೀಟ್ ಮೇಲೆ ಸ್ಕೂಟಿ ಓಡಿಸಿ ಕೆಸರು ಗೆದ್ದೆ ಮಾಡಿದ ಭೂಪ Video

ಮುಂದಿನ ಸುದ್ದಿ
Show comments