Select Your Language

Notifications

webdunia
webdunia
webdunia
webdunia

ಸಿಹಿ ಸುದ್ದಿಕೊಟ್ಟ ಪ್ರಧಾನಿ?

ಸಿಹಿ ಸುದ್ದಿಕೊಟ್ಟ ಪ್ರಧಾನಿ?
ನವದೆಹಲಿ , ಮಂಗಳವಾರ, 29 ಮಾರ್ಚ್ 2022 (13:43 IST)
ನವದೆಹಲಿ : ಇದೇ ಏಪ್ರಿಲ್ 6ರಂದು ನಡೆಯಲಿರುವ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಸಾಮರಸ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿ.

ನವದೆಹಲಿಯ ಅಂಬೇಡ್ಕರ್ ಕೇಂದ್ರದಲ್ಲಿ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿರುವ ಅವರು, ಏಪ್ರಿಲ್ 6 ರಿಂದ ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದ ದಿನವಾದ ಏಪ್ರಿಲ್ 14ರ ವರೆಗೆ ಬಿಜೆಪಿಯಿಂದ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು,

ರಕ್ತದಾನ ಶಿಬಿರಗಳು ಸೇರಿದಂತೆ ಸಾರ್ವಜನಿಕ ಹಿತಾಸಕ್ತಿ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ. 

14 ಮಾಜಿ ಪ್ರಧಾನಿಗಳ ಕೊಡುಗೆ ಗುರುತಿಸಲು ಎನ್ಡಿಎ ಸರ್ಕಾರ ಕ್ರಮ ಕೈಗೊಂಡಿದೆ. ಅದಕ್ಕಾಗಿ ಪ್ರತಿಷ್ಠಿತ ವಸ್ತು ಸಂಗ್ರಹಾಲಯಗಳನ್ನೂ ನಿರ್ಮಿಸಲಾಗಿದ್ದು, ಏಪ್ರಿಲ್ 14ರಂದು ಸಂಗ್ರಹಾಲಯವನ್ನು ಉದ್ಘಾಟಿಸಾಗುವುದು.

ನೆಹರೂ ಮ್ಯೂಸಿಯಂನಲ್ಲಿರುವ ಪ್ರಧಾನ ಮಂತ್ರಿ ಸಂಗ್ರಹಾಲಯವು ಎಲ್ಲ ಮಾಜಿ ಪ್ರಧಾನಿಗಳ ಕಾರ್ಯ ವೈಖರಿ, ಅವರು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಲಿದೆ.

ಈ ಮೂಲಕ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆ ಗುರುತಿಸುವುದನ್ನು ತಮ್ಮ ಸರ್ಕಾರ ಖಚಿತಪಡಿಸಿದೆ ಎಂದಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.  

ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಸ್ಥಾಪಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ವಸ್ತು ಸಂಗ್ರಹಾಲಯವೂ ಅಂಬೇಡ್ಕರ್ ಜನ್ಮದಿನವಾದ ಏಪ್ರಿಲ್ 14ರಂದೇ ಲೋಕಾರ್ಪಣೆಗೊಳ್ಳಲಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆನ್‍ಲೈನ್ ಗೇಮ್ ನಿಷೇಧ ರದ್ದು! : ಸುಪ್ರೀಂ