Publish Date: Sun, 27 Mar 2022 (14:07 IST)
Updated Date: Sun, 27 Mar 2022 (16:55 IST)
ನವದೆಹಲಿ : ನೀರನ್ನು ಮಿತವಾಗಿ ಬಳಸುವ ಜೊತೆಗೆ ಅದನ್ನು ಉಳಿಸಲು ಮತ್ತು ಸಾಧ್ಯವಾದಲ್ಲೆಲ್ಲಾ ನೀರನ್ನು ಮರುಬಳಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.
ಮನ್ ಕಿ ಬಾತ್ನ 87ನೇ ಕಂತಿನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ನೀರಿನ ಮರುಬಳಕೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಮನೆಯಲ್ಲಿ ಬಳಸುವ ನೀರನ್ನು ತೋಟಕ್ಕೆ ಬಳಸುವ ಮೂಲಕ ಮರುಬಳಕೆ ಮಾಡಬಹುದಾಗಿದೆ ಎಂದರು.
ನೀರನ್ನು ಉಳಿಸುವ ಈ ಕಾರ್ಯದಲ್ಲಿ ಮಕ್ಕಳು ಹೆಚ್ಚು ಕೈಜೋಡಿಸಬೇಕು. ಜಲ ಸಂರಕ್ಷಣೆನ್ನೆ ತಮ್ಮ ಜೀವನ ಧ್ಯೇಯವನ್ನಾಗಿ ಮಾಡಿಕೊಂಡಿರುವವರು ನಮ್ಮ ದೇಶದಲ್ಲಿ ಹಲವಾರು ಜನರಿದ್ದಾರೆ ಎಂದರು.
ನದಿ ಹಾಗೂ ಕೆರೆಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ನಡೆಸುತ್ತಿರುವ ಚೆನ್ನೈನ ಅರುಣ್ ಕೃಷ್ಣಮೂರ್ತಿ ಅವರನ್ನು ಎಂದು ಪ್ರಶಂಸಿದರು.
ಜೊತೆಗೆ ನೀರಿನ ಕೊರತೆಯಿರುವ ಗುಜರಾತ್ನಲ್ಲಿ ಜಲಮಂದಿರ್ ಯೋಜನೆ ಪ್ರಮುಖ ಪಾತ್ರ ವಹಿಸಿದ್ದು, ನೀರು ಸಾಕಷ್ಟು ಮಟ್ಟದಲ್ಲಿ ಹೆಚ್ಚಲು ಕಾರಣವಾಗಿದೆ. ಸ್ಥಳೀಯ ಮಟ್ಟದಲ್ಲಿ ಎಲ್ಲರೂ ಇದೇ ರೀತಿ ಜಾಗೃತರಾದರೇ ಅಭಿಯಾನವನ್ನೇ ಪ್ರಾರಂಭಿಸಬಹುದು ಎಂದು ತಿಳಿಸಿದರು.