Select Your Language

Notifications

webdunia
webdunia
webdunia
webdunia

ಒಬ್ಬನನ್ನು ರಕ್ಷಿಸಲು ಹೋಗಿ 6 ಯುವಕರು ನೀರುಪಾಲು

ಒಬ್ಬನನ್ನು ರಕ್ಷಿಸಲು ಹೋಗಿ 6 ಯುವಕರು ನೀರುಪಾಲು
bangalore , ಭಾನುವಾರ, 20 ಮಾರ್ಚ್ 2022 (19:00 IST)
ಸ್ನಾನ ಮಾಡಲೆಂದು ನದಿಗೆ ಇಳಿದಿದ್ದ 6 ಯುವಕರು ನೀರುಪಾಲಾಗಿರುವ ಘಟನೆ ಓಡಿಶಾದ ಜೈಪುರದಲ್ಲಿ ನಡೆದಿದ್ದು, ಅವರಲ್ಲಿ ಮೂರು ಯುವಕರ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಉಳಿದ ಮೂವರು ಯುವಕರ ಮೃತದೇಹ ಪತ್ತೆಹಚ್ಚಲು ಶೋಧಕಾರ್ಯ ನಡೆಸಲಾಗುತ್ತಿದೆ.
 
ಓಡಿಶಾದ ಜೈಪುರದಲ್ಲಿ ಹೋಳಿಹಬ್ಬ ಆಚರಿಸಲಾಯಿತು. ಸಂಭ್ರಮಾಚರಣೆಯ ಬಳಿಕ ಇಲ್ಲಿನ ಖರಾಸೋತ್ರ ಸರೋವರಕ್ಕೆ ಸ್ಥಾನ ಮಾಡಲು ತೆರಳಿದ್ದ ವೇಳೆ ಅನಾಹುತ ಆಗಿದೆ.ಈ ಸಂಬಂಧ ಮಾಹಿತಿ ನೀಡಿರುವ ಜಿಲ್ಲಾ ಸಹಾಯಕ ಅಗ್ನಿಶಾಮಕ ಅಧಿಕಾರಿ ಪೂರ್ಣ ಚಂದ್ರ ಮರಾಂಡಿ, ನಾವು ಆಗಮಿಸುವ ಮೊದಲೇ ಸ್ಥಳೀಯರು ಒಬ್ಬ ಯುವಕನ ಮೃತದೇಹ ಹೊರತೆಗೆದಿದ್ದರು. ಬಳಿಕ ನಮ್ಮ ತಂಡವು ಕಾರ್ಯಾಚರಣೆ ನಡೆಸಿ, ಮತ್ತಿಬ್ಬರ ಮೃತದೇಹ ಪತ್ತೆಹಚ್ಚಲಾಯಿತು. ಆದರೆ, ಶನಿವಾರ ತಡರಾತ್ರಿ ವಿದ್ಯುತ್ ಬೆಳಕು ಕಡಿಮೆಯಿದ್ದ ಕಾರಣ ಇನ್ನೂ ಮೂವರ ಮೃತದೇಹವನ್ನು ಪತ್ತೆಹಚ್ಚಲು ಶೋಧಕಾರ್ಯ ನಡೆಸಲಾಗುತ್ತಿದೆ. ಶನಿವಾರ ರಾತ್ರಿ ಕಡಿಮೆ ಬೆಳಕಿನಿಂದ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಅಗ್ನಿಶಾಮಕ ಇಲಾಖೆ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಭಾನುವಾರ ಬೆಳಿಗ್ಗೆ ಮತ್ತೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಮಾಹಿತಿ ನೀಡಿದ್ದಾರೆ.ಇಷ್ಟಕ್ಕೂ ನಡೆದಿದ್ದೇನು?
ಮೃತನ ತಂದೆ ಸತ್ಯ ಚಂದ್ರ ಜೆನಾ ಮಾಹಿತಿ ನೀಡಿರುವ ಪ್ರಕಾರ, `ಶನಿವಾರ ಹೋಳಿ ಆಡಿದ ನಂತರ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಅವರಲ್ಲಿ ಒಬ್ಬ ಸ್ನೇಹಿತ ಮುಳುಗುತ್ತಿರುವುದನ್ನು ಗಮನಿಸಿ, ಉಳಿದವರೂ ಒಬ್ಬೊಬ್ಬರಾಗಿ ರಕ್ಷಿಸುವ ಪ್ರಯತ್ನದಲ್ಲಿ ಮುಳುಗಿದರು. ಕೊನೆಯದಾಗಿ ರಕ್ಷಿಸಲು ಹೋದ ನನ್ನ ಮಗನೂ ನದಿಯಲ್ಲಿ ಮುಳುಗಿದನು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ವತ್ಥ ನಾರಾಯಣ ಹಾಗೂ ನನ್ನ ನಡುವೆ ಯಾವ ವೈಮನಸ್ಸು ಇಲ್ಲ-ಆರ್. ಅಶೋಕ್