ನವದೆಹಲಿ : ಆಸ್ಟ್ರೇಲಿಯಾದಿಂದ ಇಂದು ಭಾರತಕ್ಕೆ ಮರಳಿದ 9-10ನೇ ಶತಮಾನದ ಹಿಂದಿನ 29 ಪುರಾತನ ವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿದರು.
ಐತಿಹಾಸಿಕ ಹಿನ್ನೆಲೆಯಿರುವ 29 ಪುರಾತನ ವಸ್ತುಗಳನ್ನು ಇಂದು ಆಸ್ಟ್ರೇಲಿಯಾ ಭಾರತಕ್ಕೆ ವಾಪಸ್ ಕಳುಹಿಸಿದೆ. ಈ ಪುರಾತನ ವಸ್ತುಗಳಲ್ಲಿ ಶಿವ ಹಾಗೂ ಅವನ ಶಿಷ್ಯರು, ಭಗವಾನ್ ವಿಷ್ಣು ಮತ್ತು ಅವನ ರೂಪಗಳ ಮೂರ್ತಿ ಜೈನ ಸಂಪ್ರದಾಯ, ಭಾವಚಿತ್ರಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ಹೊಂದಿವೆ.
ಪುರಾತನ ವಸ್ತುಗಳು 9-10ನೇ ಶತಮಾನದ ಹಿಂದಿನಿದ್ದಾಗಿದೆ. ಆಸ್ಟ್ರೇಲಿಯಾದಿಂದ ಮರಳಿದ ಎಲ್ಲಾ ಪುರಾತನ ವಸ್ತುಗಳು ಮರಳು, ಅಮೃತಾಶಿಲೆ, ಕಂಚು, ಹಿತ್ತಾಳೆ, ಕಾಗದಗಳಿಂದ ರಚಿಸಲ್ಪಟ್ಟವಾಗಿದೆ.
ಈ ಶಿಲ್ಪಗಳು ಮತ್ತು ವರ್ಣಚಿತ್ರಗಳು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುತ್ತವೆ.