Publish Date: Mon, 28 Mar 2022 (19:04 IST)
Updated Date: Mon, 28 Mar 2022 (19:08 IST)
(ಸಂಪಿಗೆ ಕಟ್ಟೆ ಬಳಿಯಿಂದ )ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಸ್ವಚ್ಚತೆಯನ್ನು ಮಾಡಲಾಯಿತು,
ಅಧಿಕ ಪ್ರಮಾಣದಲ್ಲಿ ದೊರೆತ ಪ್ಲಾಸ್ಟಿಕ್ ಹಾಗೂ ಬಾಟಲಿ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.
.ಈ ಸಂದರ್ಭದಲ್ಲಿ ಮಾತನಾಡಿದ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ದರ್ಶನ್ ಜೋಯಪ್ಪ ನವರು ಕೊಡಗಿಗೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಬಿಸಾಡಬಾರದು ಹಾಗೂ ಸ್ವಚ್ಚತೆಯನ್ನು ಕಾಪಾಡಬೇಕು ಹಾಗೂ ಸ್ಥಳೀಯರು ಇದಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಮಹೇಶ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಚಂಗಪ್ಪ, ಯಶ್ವಿನ್ ಪ್ರಮುಖರಾದ ನವನೀತ್ ಪೊನ್ನೇಟಿ,ಜಯಣ್ಣ,ಹಿತೇಶ್ ,ಪ್ರೀತಮ್ ,ಪದ್ಮನಾಭ ,ವಿನಯ್ ಹಾಗೂ ಜಿಲ್ಲೆ ಮತ್ತು ಮಂಡಲ ಕಾರ್ಯಕರ್ತರು ಹಾಜರಿದ್ದರು.