Select Your Language

Notifications

webdunia
webdunia
webdunia
webdunia

2022-23ನೇ ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಅಹ್ವಾನ

2022-23ನೇ  ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಅಹ್ವಾನ
kodagu , ಶುಕ್ರವಾರ, 18 ಫೆಬ್ರವರಿ 2022 (19:47 IST)
ಕೊಡಗು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಗಳ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ 08 ಮೊರಾರ್ಜಿ ದೇಸಾಯಿ/ಡಾ.ಬಿ.ಆರ್. ಅಂಬೇಡ್ಕರ್/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳು 2022-23ನೇ ಸಾಲಿಗೆ ತರಗತಿಗೆ ಸೇರ್ಪಡೆಗೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಪ್ರವೇಶ ಪರೀಕ್ಷೆ ನಡೆಸಲಿದೆ, ಪ್ರಸ್ತುತ ಶಿಕ್ಷಣದಲ್ಲಿ 5 ನೇ ತರಗತಿಯಲ್ಲಿ ಪ್ರವೇಶ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03-02-2022
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-02-2022
 
ಪರೀಕ್ಷಾ ದಿನಾಂಕ: 20-03-2022
 
ಅರ್ಜಿ ಸಲ್ಲಿಸಲು ದಾಖಲೆಗಳು
 
 1.ವಿದ್ಯಾರ್ಥಿಯ SATS ಸಂಖ್ಯೆ (ವಿದ್ಯಾರ್ಥಿಯ ಪ್ರಮುಖ ಮಾಹಿತಿಗಳು SATS ನಿಂದ
 ಪಡೆಯುವುದರಿಂದ SATS ನಲ್ಲಿ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಅಪ್ ಡೇಟ್ ಆಗಿರಬೇಕು ಉದಾ: ಹೆಸರು, ಜಾತಿ/ಪ್ರವರ್ಗ, ಜನ್ಮ ದಿನಾಂಕ,ವಿಲಾಸ ಇತ್ಯಾದಿ)
 
 2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಅರ್ಜಿ ಸಲ್ಲಿಸುವ ದಿನಾಂಕದವರೆಗೂ ಚಾಲ್ತಿಯಲ್ಲಿರಬೇಕು
 ವಾರ್ಷಿಕ ಆದಾಯ ಮಿತಿ 
SC/ST/C-1: ₹2,50,000.
2A,2B,3A,3B: ₹1,00,000 )
 
3. ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ-2
 
4.ಇತರೆ ಮೀಸಲಾತಿ ಕೋರುವ ಪ್ರಮಾಣ ಪತ್ರಗಳು
 
ಇತರೆ ಮೀಸಲಾತಿ ಪ್ರಮಾಣ ಪತ್ರಗಳೆಂದರೆ:
A) ವಿಶೇಷ ಚೇತನ ಮಗು(PH)
B) ಅಲೆಮಾರಿ/ ಅರೆ  ಅಲೆಮಾರಿ/ ಸೂಕ್ಷ್ಮ/ ಅತಿ ಸೂಕ್ಷ್ಮ ಮಗು
C) ಮಾಜಿ ಸೈನಿಕರ ಮಗು
D) ಆಶ್ರಮ/ ವಸತಿ ಶಾಲೆ ಮಗು
E) ಪೌರ ಕಾರ್ಮಿಕರ/ಸಫಾಯಿ ಕರ್ಮಚಾರಿ ಮಗು
F)ಬಾಲ ಕಾರ್ಮಿಕ,ವಿಧವೆ ಮಗು,ದೇವದಾಸಿ
ಮಗು,ವಿಧುರನ ಮಗು,ಯೋಜನಾ ನಿರಾಶ್ರಿತರ ಮಗು,ಅನಾಥ ಮಗು,ಹೆಚ್.ಐ.ವಿ ಪೀಡಿತರ ಮಗು,ಆತ್ಮಹತ್ಯೆ ರೈತರ ಮಗು.
G)ಸ್ಥಳೀಯ ಅಭ್ಯರ್ಥಿ( ಸ್ಥಳೀಯ ಅಭ್ಯರ್ಥಿ ಎಂದರೆ ಸ್ವಂತ ತಾಲ್ಲೂಕಿನ ಅಭ್ಯರ್ಥಿ)
 
 
ಮೇಲ್ಕಂಡ ವಿಶೇಷ ವರ್ಗಕ್ಕೆ ಸೇರಿದಲ್ಲಿ ಸಂಬಂಧಿತ ಸಕ್ಷಮ ಪ್ರಾಧಿಕಾರದಿಂದ  ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸುವುದು.
 
 
ಅರ್ಜಿಯನ್ನು ಸಮೀಪದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯಲ್ಲಿಯೇ ಆನ್ ಲೈನ್ ಮೂಲಕ ಸಲ್ಲಿಸಬೇಕು.
 
ಅರ್ಜಿ ಸಲ್ಲಿಸುವಾಗ ಪ್ರವೇಶ ಬಯಸುವ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ (ಜಿಲ್ಲೆಯ ಎಲ್ಲ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು)
 
ಅಭ್ಯರ್ಥಿಯು ತನ್ನ ಸ್ವಂತ ವಸತಿ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರಬೇಕು .
(ಸ್ವಂತ ಜಿಲ್ಲೆ ಎಂದರೆ ಜಾತಿ, ಆದಾಯ ಪ್ರಮಾಣ ಪತ್ರ ಅಥವಾ ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ಜಿಲ್ಲೆ.)
 
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ.
 
* *SATS ವಿವರದಲ್ಲಿ ಯಾವುದೇ ನ್ಯೂನತೆಯನ್ನು ನೇರವಾಗಿ ಮಾರ್ಪಾಡು ಮಾಡಲು ಅರ್ಜಿ ಹಾಕುವ ಸ್ಥಳದಲ್ಲಿ ಅವಕಾಶವಿಲ್ಲ. 
(ಆದ್ದರಿಂದ ನೀವು ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ಅದನ್ನು ಸರಿಪಡಿಸಿದ ನಂತರ ಪರಿಗಣಿಸಲಾಗಿದೆ.)
 
ಪ್ರಕಟಣೆ:
ಜಿಲ್ಲಾ ಪ್ರವೇಶ ಪರೀಕ್ಷಾಧಿಕಾರಿಗಳು
ಕೊಡಗು.

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸೌಧದಲ್ಲಿ ಕಾಂಗ್ರೆಸ್ ದಂಡು