Select Your Language

Notifications

webdunia
webdunia
webdunia
webdunia

ಕೊಡಗು ಜಿಲ್ಲೆಯಲ್ಲಿ ಬುಧವಾರ 50 ಹೊಸ ಕೋವಿಡ್-19 ಪ್ರಕರಣ

ಕೊಡಗು ಜಿಲ್ಲೆಯಲ್ಲಿ ಬುಧವಾರ 50 ಹೊಸ ಕೋವಿಡ್-19 ಪ್ರಕರಣ
ಕೊಡಗು , ಬುಧವಾರ, 12 ಜನವರಿ 2022 (21:03 IST)
webdunia
ಜಿಲ್ಲೆಯಲ್ಲಿ ಬುಧವಾರ 50 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. 47 ಪ್ರಕರಣಗಳು ಆರ್ ಟಿಪಿಸಿಆರ್ ಮತ್ತು 03 ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ 10, ವಿರಾಜಪೇಟೆ ತಾಲೂಕಿನಲ್ಲಿ 25, ಸೋಮವಾರಪೇಟೆ ತಾಲೂಕಿನಲ್ಲಿ 15 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ.            
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 36,195 ಆಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 09 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 35,427 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 438 ಮರಣ ಪ್ರಕರಣಗಳು ವರದಿಯಾಗಿದೆ. 330 ಸಕ್ರಿಯ ಪ್ರಕರಣಗಳು, ಕಳೆದ 24 ಗಂಟೆಗಳ ಕಾಲ ಸಾವು ಸಂಭವಿಸಿಲ್ಲ, ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 61 ಆಗಿದೆ. ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ದರ ಶೇ.2.15 ಆಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆಯ್ಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಗಳನ್ನು ಬಂದ್ ಮಾಡುವ ಚಿಂತನೆ ಇಲ್ಲ: ಶಿಕ್ಷಣ ಸಚಿವ ನಾಗೇಶ್