ಗಾಂಧೀನಗರ : ಈಚೆಗಷ್ಟೇ ನವೀಕರಣಗೊಂಡು ಉದ್ಘಾಟನೆಯಾಗಿದ್ದ ಗುಜರಾತ್ನ ತೂಗು ಸೇತುವೆ ಕುಸಿತದಿಂದಾಗಿ ಈವರೆಗೆ 60 ಮಂದಿ ಸಾವನ್ನಪ್ಪಿದ್ದು, ನೂರಾರು ಅಪಾಯದಲ್ಲಿ ಸಿಲುಕಿದ್ದಾರೆ.
ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಕುಸಿತದ ವೇಳೆ ಸೇತುವೆ ಮೇಲೆ 500ಕ್ಕೂ ಹೆಚ್ಚು ಮಂದಿ ಇದ್ದರು. ಕುಸಿತದಿಂದಾಗಿ ಇನ್ನೂ 100ಕ್ಕೂ ಹೆಚ್ಚು ಮಂದಿ ನೀರುಪಾಲಾಗಿದ್ದಾರೆ. ಅಪಾಯದಲ್ಲಿದ್ದವರ ರಕ್ಷಣೆ ಕಾರ್ಯಾಚರಣೆ ಭರದಿಂದ ಸಾಗಿದೆ.
ಇಂದು ಗುಜರಾತ್ನಲ್ಲಿದ್ದ ಪ್ರಧಾನಿ ನರೇಂದ್ರ ಅವರು ತುರ್ತು ರಕ್ಷಣಾ ಕಾರ್ಯಾಚರಣೆಗೆ ಆದೇಶ ನೀಡಿದ್ದಾರೆ. ಗಾಯಾಳುಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಹಲವು ಸ್ಥಳೀಯರು ಸಹ ಕೈಜೋಡಿಸಿದ್ದಾರೆ.
ಪ್ರಧಾನಿಯವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಮಾತನಾಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುವಂತೆ ಹೇಳಿದರು. ಅಪಘಾತದ ಸುದ್ದಿ ಬರುತ್ತಿದ್ದಂತೆ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಮೊರ್ಬಿಗೆ ಧಾವಿಸಿದ್ದಾರೆ.