Select Your Language

Notifications

webdunia
webdunia
webdunia
Wednesday, 2 April 2025
webdunia

ನನ್ನ ಪತಿ ಸೆಕ್ಸ್‌ಗಾಗಿ ಪೀಡಿಸ್ತಾನೆ ಎಂದ 87ರ ವೃದ್ಧೆ!

ಗುಜರಾತ್
ಗಾಂಧಿನಗರ , ಮಂಗಳವಾರ, 13 ಸೆಪ್ಟಂಬರ್ 2022 (14:23 IST)
ಗಾಂಧಿನಗರ : ಗುಜರಾತ್ನ 87 ವರ್ಷದ ವೃದ್ಧೆಯೊಬ್ಬರು 89 ವರ್ಷದ ತನ್ನ ಪತಿ ಪದೇ, ಪದೇ ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಾನೆ ಎಂದು ಮಹಿಳಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆ.

ವಡೋದರಾದ 87 ವರ್ಷದ ವೃದ್ಧೆ ಪದೇ, ಪದೇ ಲೈಂಗಿಕ ಕ್ರಿಯೆ ನಡೆಸುತ್ತವಂತೆ ಒತ್ತಾಯಿಸುತ್ತಿದ್ದ ತನ್ನ ಪತಿಯ ಕಿರುಕುಳದಿಂದ ಬೇಸತ್ತಿದ್ದಾರೆ.

ಗುಜರಾತ್ನ ಎಲ್ಲಾ ಮಹಿಳಾ ನಿವಾಸಿಗಳಿಗೆ ಸರ್ಕಾರ ಟೋಲ್-ಫ್ರೀ ಮಹಿಳಾ ಸಹಾಯವಾಣಿ ಸಂಖ್ಯೆ -181 ಅಭಯಂ ಯೋಜನೆ ರೂಪಿಸಿದ್ದು, ಈ ಬಗ್ಗೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ.

ಈ ಕರೆಯನ್ನು ಸ್ವೀಕರಿಸಿದ ಅಭಯಂ ತಂಡ ನಿಜಕ್ಕೂ ದಿಗ್ಭ್ರಮೆಗೊಂಡಿದೆ. ತನ್ನ ಗಂಡನ ಕಿರುಕುಳದಿಂದ ಹೇಗಾದರೂ ಪಾರು ಮಾಡುವಂತೆ ವೃದ್ಧೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

89 ವರ್ಷದ ತನ್ನ ಪತಿ ಇಂಜಿನಿರ್ ಆಗಿದ್ದು, ವಡೋದರದ ಸಯಾಜಿಗಂಜ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ವಯಸ್ಸಾದರೂ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ಇಬ್ಬರಿಗೂ ಹಲವಾರು ವರ್ಷಗಳಿಂದ ಆರೋಗ್ಯ ಸಂಬಂಧ ಸಮಸ್ಯೆಗಳಿದೆ. ತಮ್ಮ ಮಗ ಹಾಗೂ ಸೊಸೆಯೊಂದಿಗೆ ವೃದ್ಧ ದಂಪತಿ ನೆಲೆಸುತ್ತಿರುವುದಾಗಿ ತಿಳಿಸಿದ್ದಾರೆ.   

Share this Story:

Follow Webdunia kannada

ಮುಂದಿನ ಸುದ್ದಿ

ವೆಜ್ ಹೋಟೆಲ್ ಆಹಾರದಲ್ಲಿ ನಾನ್ ವೆಜ್ ...!!!