Publish Date: Sun, 28 Aug 2022 (13:03 IST)
Updated Date: Sun, 28 Aug 2022 (13:06 IST)
ಗಾಂಧಿನಗರ : ಗುಜರಾತಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಅವರನ್ನು ಶನಿವಾರ ಸಂಜೆ ಭೇಟಿಯಾಗಿದ್ದಾರೆ.
ಎರಡು ದಿನಗಳ ಕಾಲ ಗುಜರಾತ್ಗೆ ಭೇಟಿ ನೀಡಿರುವ ಮೋದಿ ಅವರು ಶನಿವಾರ ಅಹಮದಾಬಾದ್ನಲ್ಲಿ ನಡೆದ ಖಾದಿ ಉತ್ಸವದಲ್ಲಿ ಭಾಗವಹಿಸಿದರು.
ನಂತರ ಸಂಜೆ ಗಾಂಧಿನಗರದ ರೈಸನ್ ಪ್ರದೇಶದಲ್ಲಿರುವ ನಿವಾಸದಲ್ಲಿ ಹೀರಾಬೆನ್ ಅವರನ್ನು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾಲ ಕಳೆದರು ಎಂದು ಅವರ ಕಿರಿಯ ಸಹೋದರ ಪಂಕಜ್ ಮೋದಿ ಹೇಳಿದ್ದಾರೆ.
ಭಾನುವಾರ ಕಛ್ ಮತ್ತು ಗಾಂಧಿನಗರದಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಶನಿವಾರ ರಾತ್ರಿ ಗಾಂಧೀನಗರದಲ್ಲಿಯೇ ಕಳೆದಿದ್ದಾರೆ.