ಚಿತ್ರದುರ್ಗ : ಇಲ್ಲಿನ ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗಿನ ಜಾವದವರೆಗೂ ರಾಜಿ ಸಂಧಾನ ಸಭೆ ನಡೆದಿದೆ.
									
								
			        							
								
																	ಚಿತ್ರದುರ್ಗ ಬಳಿಯ ಗ್ರಾಮವೊಂದರಲ್ಲಿ ಸಂಧಾನ ಸಭೆ ನಡೆದಿದ್ದು, ಮುರುಘಾಶ್ರೀ, ಬಸವರಾಜನ್ ನೇರ ಭೇಟಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಮಠದ ಆಡಳಿತಾಧಿಕಾರಿಯಾಗಿ ಬಸವರಾಜನ್ ಮುಂದುವರಿಕೆಗೆ ಚಿಂತನೆ ನಡೆದಿದೆ. ಈ ಮೂಲಕ ಮುರುಘಾ ಶ್ರೀ, ಬಸವರಾಜನ್ ನಡುವಿನ ಸಂಧಾನ ಯಶಸ್ವಿಯಾಗಿದೆ .
									
										
								
																	ಸಂಧಾನ ಸಭೆಯಲ್ಲಿ ಮಠಾಧೀಶರು, ಮುಖಂಡರು ಭಾಗಯಾಗಿದ್ದರು. ಇತ್ತ ತಮ್ಮ ಮೇಲಿನ ಲೈಂಗಿಕ ಆರೋಪದ ಬಗ್ಗೆ ಶ್ರೀಗಳು ಮಾತಾಡಿದ್ದು, ನಮ್ಮ ಪಕ್ಕದಲ್ಲೇ ಇದ್ದು ಹೋದವರೇ ಪಿತೂರಿ, ಒಳಸಂಚು ಮಾಡಿದ್ದಾರೆ.
									
											
							                     
							
							
			        							
								
																	ಯಾವ ಸಮಸ್ಯೆ, ಆರೋಪ ಶಾಶ್ವತ ಅಲ್ಲ. ಇದು ಮುರುಘಾ ಶರಣರ ಅಭಿಮಾನವನ್ನು ಎಬ್ಬಿಸುವ ಕೆಲಸವಾಗಿದೆ. ಮೇಲೆಕ್ಕೆ ಹೋದಂತೆಲ್ಲ ಆಪತ್ತುಗಳು, ಕಿರುಕುಳಗಳು ಇರ್ತಾವೆ ಎಂದಿದ್ದಾರೆ. ಅಲ್ಲದೇ ನಾವು ಸಂಧಾನನಕ್ಕೂ ಸಿದ್ಧ, ಸಮರಕ್ಕೂ ಬದ್ಧ. ಸಂಧಾನ ಮತ್ತು ಸಮರ.