Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಹರ್ ಘರ್ ಅಭಿಯಾನ ಯಶಸ್ವಿಗೊಳಿಸುವ ಸಲುವಾಗಿ ಸಭೆ..!

webdunia
ಬುಧವಾರ, 3 ಆಗಸ್ಟ್ 2022 (21:03 IST)
“ಹರ್ ಘರ್ ತಿರಂಗಾ”ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಆಯಾ ವಲವ ಕಛೇರಿ, ವಾರ್ಡ್ ಕಛೇರಿಗಳು, ಸರ್ಕಾರಿ ಕಛೇರಿಗಳು/ಕಟ್ಟಡಗಳು, ಪ್ರಮುಖ ಮಾಲ್ಗಳು, ಜನನಿಬಿಡ ಪ್ರದೇಶಗಳು ಸೇರಿದಂತೆ ಇನ್ನಿತರೆ ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡುವ ಸಲುವಾಗಿ ಕೂಡಲೆ ಸೇಲ್ಸ್ ಕೌಂಟರ್ ತೆರೆಯಲು ವಿಶೇಷ ಆಯುಕ್ತರಾದ ಶ್ರೀ ರಂಗಪ್ಪ ರವರು ಎಲ್ಲಾ ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ನಡೆಯಲಿರುವ “ಹರ್ ಘರ್ ತಿರಂಗಾ” ಅಭಿಯಾನವನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಯಾ ವಲಯ ವ್ಯಾಪ್ತಿಯಲ್ಲಿ ಮಾರಾಟ ಮಾಡುವ ಸ್ಥಳಗಳಲ್ಲಿ ಕೂಡಲೆ ಸೇಲ್ಸ್ ಕೌಂಟರ್ ಗಳನ್ನು ತೆಗೆದು ಆ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸಲು ಸೂಚಿಸಿದರು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿಯ ವನ್ಯಜೀವಿಗಳಿಗಾಗಿ ಟೋಲ್ ಫ್ರೀ ನಂಬರ್ ಬಿಡುಗಡೆ