Select Your Language

Notifications

webdunia
webdunia
webdunia
webdunia

ಮಮತಾ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಮಮತಾ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ನವದೆಹಲಿ , ಸೋಮವಾರ, 22 ಮೇ 2023 (15:35 IST)
ಚಲನಚಿತ್ರವು ಘಟನೆಗಳ ಕಾಲ್ಪನಿಕ ಆವೃತ್ತಿಯಾಗಿದೆ. 32 ಸಾವಿರ ಮಹಿಳೆಯರ ಮತಾಂತರದ ಅಂಕಿಅಂಶವನ್ನು ಖಚಿತಪಡಿಸಲು ಯಾವುದೇ ಅಧಿಕೃತ ದತ್ತಾಂಶಗಳಿಲ್ಲ ಎಂದು ಚಿತ್ರದ ವಿರುದ್ಧ ವಾದಿಸಲಾಗಿದೆ.
 
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಪ್ರಮಾಣೀಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ನ್ಯಾಯಾಲಯದ ಬೇಸಿಗೆ ರಜೆಯ ನಂತರ ವಿಚಾರಣೆ ನಡೆಸಲಿದೆ. ಅದಕ್ಕಾಗಿ ನ್ಯಾಯಾಲಯವು ಮೊದಲು ಚಲನಚಿತ್ರವನ್ನು ನೋಡಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮೇ 8 ರಂದು ಪಶ್ಚಿಮ ಬಂಗಾಳ ಸಿನಿಮಾಗಳ ನಿಯಂತ್ರಣ ಕಾಯಿದೆಯ ಸೆಕ್ಷನ್ 4 ಹಾಗೂ ಸೆಕ್ಷನ್ 6 (1) ರ ಅಡಿಯಲ್ಲಿ ರಾಜ್ಯದ ಶಾಂತಿ ಕಾಪಾಡುವ ಕಾರಣ ನೀಡಿ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿತ್ತು. ಅಲ್ಲದೆ ತಮಿಳುನಾಡು ಸರ್ಕಾರ ಚಿತ್ರ ನಿಷೇಧಕ್ಕೆ ತಯಾರಿ ನಡೆಸಿತ್ತು.

ಈ ಎರಡು ಸರ್ಕಾರಗಳ ನಿರ್ಧಾರವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸುಪ್ರೀಂಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಮೂಲಭೂತ ಹಕ್ಕಾದ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ನಿರ್ಧಾರ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

200 ಯೂನಿಟ್ ಗೆ ವಿದ್ಯುತ್ ಗೆ ಯಾರು ಹಣ ಪಾವತಿಸುವುದು ಬೇಡ..!