Select Your Language

Notifications

webdunia
webdunia
webdunia
Saturday, 5 April 2025
webdunia

ಕ್ರಿಮಿನಲ್ ಅಭ್ಯರ್ಥಿ ಪಟ್ಟಿ ಬಹಿರಂಗಪಡಿಸದ ಪಕ್ಷಕ್ಕೆ ಸುಪ್ರೀಂ ಕೋರ್ಟ್ ದಂಡ!

ರಾಜಕೀಯ
ನವದೆಹಲಿ , ಬುಧವಾರ, 11 ಆಗಸ್ಟ್ 2021 (07:19 IST)
ನವದೆಹಲಿ(ಆ.11): ಭಾರತದಲ್ಲಿ ಕ್ರಿಮಿನಲ್ ಹಿನ್ನಲೆ ಹೊಂದಿದ ಅಥವಾ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿದೆ. ಈ ನಿಯಮಕ್ಕೆ ದೇಶದಲ್ಲಿ ಭಾರಿ ವಿರೋಧವಿದೆ. ರಾಜಕೀಯವನ್ನು ಕ್ರಿಮಿನಲ್ ಹಿನ್ನಲೆ ಹೊಂದಿದವರಿಗೆ ಮುಕ್ತಗೊಳಿಸಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಚುನಾವಣೆಗೂ ಮೊದಲು ಪಕ್ಷಗಳು ತಮ್ಮ ಅಭ್ಯರ್ಥಿಗಳ ಸಂಪೂರ್ಣ
ವಿವರವನ್ನುಸಾರ್ವಜನಿಕಗೊಳಿಸಬೇಕು. ಇದರಲ್ಲಿ ಕ್ರಿಮಿನಲ್ ಹಿನ್ನಲೆ ಹೊಂದಿದ್ದರೆ ಅಂಥವರ ವಿವರವನ್ನೂ ಬಹಿರಂಗಗೊಳಿಸಬೇಕು ಎಂದು  ಸುಪ್ರೀ ಕೋರ್ಟ್ ಹೇಳಿತ್ತು. ಆದರೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಈ ನಿಯಮ ಉಲ್ಲಂಘಿಸಿದೆ. ಹೀಗಾಗಿ ಹಲವು ಪಕ್ಷಗಳಿಗೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ.
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಪಕ್ಷಗಳು ಸುಪ್ರೀಂ ಆದೇಶವನ್ನು ನಿರ್ಲಕ್ಷಿಸಿತ್ತು. ಸಿಪಿಎಂ, ಎನ್ಸಿಪಿ ಪಕ್ಷಕ್ಕೆ ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇನ್ನು ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್, ಜೆಡಿಯು, ಆರ್ಜೆಡಿ ಹಾಗೂ ಎಲ್ಜೆಪಿ ಪಕ್ಷಗಳಿಗೆ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ದಂಡ ಮಾತ್ರವಲ್ಲ ಇದರ ಜೊತೆಗೆ ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದೆ.  ಪ್ರತಿ ಬಾರಿ ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನಲೆ ಹೊಂದಿದ ಅಭ್ಯರ್ಥಿಗಳ ಮಾಹಿತಿಯನ್ನು ಬಹಿರಂಗ ಪಡಿಸುತ್ತಿಲ್ಲ. ಆದೇಶಕ್ಕೂ ಗೌರವ ನೀಡುತ್ತಿಲ್ಲ. ಹೀಗಾಗಿ 2020ರ ಫೆಬ್ರವರಿಯಲ್ಲಿ ನೀಡಿದ ಆದೇಶದ ಮೇಲೆ ಕೆಲ ಮಾರ್ಪಾಡು ಮಾಡಿ ಹೊಸ ತೀರ್ಪು ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ ಚೆಕ್ ಮಾಡೋಕೆ ಪ್ರತಿ ಉದ್ಯೋಗಿ ಮನೆಯಲ್ಲಿ ಸಿಸಿಟಿವಿ..!