Select Your Language

Notifications

webdunia
webdunia
webdunia
webdunia

ರಾಜಕೀಯಕ್ಕೆ ಗುಡ್ ಬೈ ಹೇಳಿದ ವಿ.ಶ್ರೀನಿವಾಸ ಪ್ರಸಾದ್

ರಾಜಕೀಯಕ್ಕೆ ಗುಡ್ ಬೈ ಹೇಳಿದ ವಿ.ಶ್ರೀನಿವಾಸ ಪ್ರಸಾದ್
ಬೆಂಗಳೂರು , ಶುಕ್ರವಾರ, 6 ಆಗಸ್ಟ್ 2021 (12:27 IST)
ಬೆಂಗಳೂರು (ಆ.06):  ಹುಟ್ಟಹಬ್ಬದ ದಿನವೇ ಮುತ್ಸದ್ದಿ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ ಚುನಾವಣಾ ರಾಜಕೀಯಕ್ಕೆ ಗುಡ್ಬೈ ಹೇಳಿದ್ದಾರೆ.  ಮೈಸೂರಿನಲ್ಲಿಂದು ತಮ್ಮ ಚುನಾವಣಾ ವಿದಾಯದ ಬಗ್ಗೆ ಘೋಷಿಸಿದ ಸಂಸದ ಶ್ರೀನಿವಾಸ ಪ್ರಸಾದ್ ನಾನು ಇದುವರೆಗೆ 14 ಚುನಾವಣೆ ಎದುರಿಸಿದ್ದೇನೆ.

12ನೇ ಚುನಾವಣೆಯೇ ಸಾಕಾಗಿತ್ತು. ಕಂದಾಯ ಸಚಿವನಾಗಿ ಅವಧಿ ಪೂರ್ಣಗೊಳಿಸಲು ಎರಡು ವರ್ಷ ಅವಕಾಶ ನೀಡಿದ್ದರೆ ಸಾಕಿತ್ತು. ಆದರೆ ಅನಿವಾರ್ಯವಾಗಿ ಮತ್ತೆರಡು ಚುನಾವಣೆ ಎದುರಿಸಬೇಕಾಯ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಅದೇ ನನ್ನ ಕೊನೆಯ ಚುನಾವಣೆ ಆಗುತ್ತಿತ್ತು. ಇದುವರೆಗಿನ ರಾಜಕೀಯ ಜೀವನದ ಬಗ್ಗೆ ತೃಪ್ತಿ ಇದೆ. ಚುನಾವಣಾ ರಾಜಕಾರಣ ನನಗೆ ಸಾಕಾಗಿದೆ.  ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ  ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.
ಶ್ರೀನಿವಾಸ್ ಪ್ರಸಾದ್ ಬಗ್ಗೆ ಒಂದಷ್ಟು : ಒಟ್ಟು 14 ಚುನಾವಣೆಗಳನ್ನು ಎದುರಿಸಿ 6 ಬಾರಿ ಲೋಕಸಭೆಗೆ 2 ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ವಿ ಶ್ರೀನಿವಾಸ ಪ್ರಸಾದ್ ಈಗ  ತಮ್ಮ 75ನೇ ಹುಟ್ಟು ಹಬ್ಬದ ಸಂದರ್ಭದಲ್ಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದರು.
ಆಗಸ್ಟ್ 1947ರಲ್ಲಿ ಜನಿಸಿದ ಶ್ರೀನಿವಾಸ್ ಪ್ರದಾಸ್ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿದರು.  ಬಳಿಕ ಕನತಾ ದಳ ಸೇರಿ ಸದ್ಯ ಬಿಜೆಪಿಯಲ್ಲಿದ್ದಾರೆ. 1983 ರಲ್ಲಿ ರಾಜಕೀಯ ಜೀವನ ಅರಂಭಿಸಿದರು.
ಮುಲಾಜಿಲ್ಲದ ಮಾತು : ಶೋಷಿತ ದಲಿತರ ಪ್ರಮುಖ ನಾಯಕರಾಗಿ ಕೆಂದ್ರದಲ್ಲಿ ವಾಜಪೇಯಿ ಸರ್ಕಾರದಲ್ಲಿ ಆಹಾರ ಮಂತ್ರಿಯಾಗಿ ಕಾರ್ಯನಿರ್ವಹಿಸಿ ರಾಜ್ಯದಲ್ಲೂ ಕಮದಾಯ ಸಚಿವರಾಗಿ ಕಾರ್ಯನಿರ್ವಹಿಸಿರುವ ಪ್ರಸಾದ್ ಸಾರ್ವಜನಿಕ ವಿಚಾರಗಳನ್ನು ಯಾವುದೇ ಮುಲಾಜು ಇಲ್ಲದೇ ಮಾತನಾಡಬಲ್ಲ ನಾಯಕ.
ದಿ. ರಾಜೀವ್ ಗಾಂಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದಾಗ ಅದನ್ನು ಬಹಿರಂಗವಾಗಿಯೇ ಖಂಡಿಸಿದ್ದರು. ಆದ ಶ್ರೀನಿವಾಸ್ ಪ್ರಸಾದ್ ಕರ್ನಾಟಕ ಬಿಜೆಪಿ  ಉಪಾಧ್ಯಕ್ಷರಾಗಿದ್ದರು. ಈಗ ಅ ಪಕ್ಷದಿಂದ ಚಾಮರಾಜನಗರದ ಸಂಸದರಾಗಿದ್ದಾರೆ. 4 ಬಾರಿ ಕಾಂಗ್ರೆಸ್ನಿಂದ 1 ಬಾರಿ ಜೆಡಿಯುನಿಂದ 1 ಬಾರಿ ಬಿಜೆಪಿಯಿಂದ  ಆಯ್ಕೆಯಾಗಿದ್ದಾರೆ.
ರಾಜಕೀಯ ತಂತ್ರಗಾರಿಕೆ : ಸಂಸ್ಥಾ ಕಾಂಗ್ರೆಸ್ ಯುವ ಜನತಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಕರ್ನಾಟಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅನೇಕ ಯುವಕರಿಗೆ ಚುನಾವಣೆಗಳಲ್ಲಿ  ಸ್ಪರ್ಧಿಸುವ ಅವಕಾಶ ನೀಡಿದವರು ಶ್ರೀನಿವಾಸ್ ಪ್ರಸಾದ್.  
ಅವರು ಹಿರಿಯ ಮುತ್ಸದ್ದಿ : ಸಂಸದ ವಿ. ಶ್ರೀನಿವಾಸ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾ.ಅವರು ಹಿರಿಯ ಮುತ್ಸದ್ದಿ. ಅವರನ್ನು ನಮ್ಮ ಪಕ್ಷದಲ್ಲಿ ಗೌರವದಿಂದ ನಡೆಸಿಕೊಂಡಿದ್ದೇವೆ. ಅವರು ಇನ್ನೂ ಮುಂದುವರೆಯಬೇಕು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೆಳಿದರು.
ಹಿರಿಯರು ನಮ್ಮ ಜತೆಗಿರಬೇಕು, ಮಾರ್ಗದರ್ಶನ ಮಾಡಬೇಕು. ಅವರ ಅನುಭವ ದೇಶಕ್ಕೆ, ಸಮಾಜಕ್ಕೆ ಸಿಗಬೇಕು ಎಂದು ಕೊಡಗಿನಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಸ್ಥಾನ ಪಡೆದಿದ್ದೇಗೆ ಶಶಿಕಲಾ ಜೊಲ್ಲೆ?